ರಿಯಾದ್/ ಕೆಎಸ್‌ಎ: ಗುಡ್ಡ ಕುಸಿದು ಸುಮಾರು 350ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಮಂದಿ ನಾಪತ್ತೆಯಾದ ವಯನಾಡ್ ದುರಂತಕ್ಕೆ ಸೌದಿ ಅರೇಬಿಯಾದ ರಾಜ ಸಲ್ಮಾನ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಸಂತಾಪ ಸೂಚಿಸಿದ್ದಾರೆ.
ಸಂತಾಪ ಸೂಚಿಸಿ, ರಾಷ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವ ರಾಜ ಕುಟುಂಬ, ನೀರಿನಲ್ಲಿ ನಾಪತ್ತೆಯಾದವರ ಶೀಘ್ರ ಪತ್ತೆಯಾಗಲಿ ಹಾಗೂ ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿರುವುದಾಗಿ ಅರಬ್ ನ್ಯೂಸ್ ವರದಿ ಮಾಡಿದೆ.