
Where’s Bibi? ಆರು ಬೆರಳುಗಳಿರುವ ನೆತನ್ಯಾಹು ವಿಡಿಯೋ! | ಹಲವು ಅನುಮಾನಗಳಿಗೆ ಎಡೆ ಮಾಡಿದ ವೀಡಿಯೋ
ಜೆರುಸಲೆಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಇತ್ತೀಚಿನ ಮಾರ್ಚ್ 13 ರ ವೀಡಿಯೊದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿದೆ. ಕಾರಣ ಈ ವಿಡಿಯೋದಲ್ಲಿ ನೆತನ್ಯಾಹು ಅವರ ಒಂದು ಕೈಯಲ್ಲಿ ಆರು ಬೆರಳುಗಳು ಇರುವಂತೆ ತೋರಿಸುತ್ತಿದೆ. AI ಬಳಸಿ ಈ ವಿಡಿಯೋ ಮಾಡಿರಬಹುದಾ?ಎಂಬ ಅನುಮಾನ ಹುಟ್ಟುಹಾಕಿದೆ.
אתמול במסיבת העיתונאים עמדתי על היעדים הברורים של המערכה: פגיעה במשטר הטרור באיראן, המשך המאבק מול שלוחותיו, והבטחת ביטחונה ועתידה של ישראל.
אנחנו לא מחכים. אנחנו יוזמים, אנחנו תוקפים ואנחנו עושים זאת בעוצמה.
צפו בדברים המלאים >> pic.twitter.com/hubJWVdiKQ
— Benjamin Netanyahu – בנימין נתניהו (@netanyahu) March 13, 2026
ಶುಕ್ರವಾರ ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದ ನೆತನ್ಯಾಹು, ಇರಾನ್ ವಿರುದ್ಧ ಇಸ್ರೇಲ್ ಮತ್ತು ಯುಎಸ್ ಯುದ್ಧದ ಕುರಿತು ಮಾತನಾಡಿದ್ದರು. ಫೆಬ್ರವರಿ 28 ರಂದು ಸಂಘರ್ಷದ ಮೊದಲ ದಿನದಂದು, ಇರಾನ್ನ ಸರ್ವೋಚ್ಚ ನಾಯಕ ಅಯತಲ್ಲೋಹ್ ಅಲಿ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು.
ನೆತನ್ಯಾಹು ಹಂಚಿಕೊಂಡಿದ್ದ ವಿಡಿಯೋದಲ್ಲಿ ಅವರ ಬಲಗೈಯಲ್ಲಿ ಆರು ಬೆರಳುಗಳು ಇರುವಂತೆ ತೋರುತ್ತಿದೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ.
Classic AI finger glitch’ and ‘look closely at his hand’ಎಂಬ ಶೀರ್ಷಿಕೆಯಡಿ ಈ ವಿಡಿಯೋವನ್ನು AI ನಿಂದ ಎಡಿಟ್ ಮಾಡಲಾಗಿದೆಯೇ ಎಂದು ಪ್ರಶ್ನಿಸುವ ಪೋಸ್ಟ್ಗಳಿಗೆ ಲಕ್ಷಾಂತರ ವೀಕ್ಷಣೆಗಳು ಬಂದಿವೆ. ಅನೇಕ ಬಳಕೆದಾರರು, ನೆತನ್ಯಾಹು ಸತ್ತಿದ್ದಾರೆ ಎಂದು ಹೇಳಿದ್ದಾರೆ. ಅಂತಹ ಪೋಸ್ಟ್ಗಳ ಕುರಿತು X ನ AI ಚಾಟ್ಬಾಟ್ ಗ್ರೋಕ್ ಪರಿಶೀಲಿಸಿದ್ದು, ಸುಳ್ಳು ಎಂದು ಹೇಳಿದೆ.
Washington D.C is lying to the American people about what is going on in Iran.
It is not going well.
Also where is Bibi Netanyahu? Why is his office releasing and deleting fake AI videos from him and why is there mass panic at the White House?
— Candace Owens (@RealCandaceO) March 14, 2026
ಅಮೆರಿಕದ ಕನ್ಸರ್ ವೇಟಿವ್ ಪೊಲಿಟಿಕಲ್ ಕಾಮೆಂಟರ್ ಕ್ಯಾಂಡೇಸ್ ಓವೆನ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ “ಬೀಬಿ ಎಲ್ಲಿ?” ಎಂದು ಕೇಳಿದ್ದಾರೆ. ನೆತನ್ಯಾಹು ಅವರನ್ನು ಈ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇಸ್ರೇಲ್ ಪ್ರಧಾನಿ ಕಾರ್ಯಾಲಯ ನಕಲಿ AI ವೀಡಿಯೊಗಳನ್ನು ಯಾಕೆ ಬಿಡುಗಡೆ ಮಾಡಿ, ಡಿಲೀಟ್ ಮಾಡುತ್ತಿದೆ. ಶ್ವೇತಭವನದಲ್ಲಿ ಯಾಕೆ ಆತಂಕವಿದೆ ಎಂದು ಬರೆದುಕೊಂಡಿದ್ದಾರೆ.




