Featured StoryState News

ಪಕ್ಷದಿಂದ ಉಚ್ಚಾಟಿಸಿದ್ರೆ 40 ಸಾವಿರ ಕೋಟಿ ಅವ್ಯವಹಾರದ ದಾಖಲೆ ಬಿಡುಗಡೆ: ಬಿಜೆಪಿಗೆ ಯತ್ನಾಳ್ ಎಚ್ಚರಿಕೆ

ಸ್ವಯಂ ಪಕ್ಷವನ್ನೇ ಕಳ್ಳರ ಪಕ್ಷ ಎಂದ ಯತ್ನಾಳ್

ವಿಜಯಪುರ: ಬಿ ಎಸ್ ಯಡಿಯೂರಪ್ಪ ಚೇಲಾಗಳಿಗೆ ಸ್ಥಾನಮಾನ ನೀಡುವ ಮೂಲಕ ಇಡೀ ಲಿಂಗಾಯತ, ಪಂಚಮಸಾಲಿ ಪಂಗಡಗಳ ಮೂಗಿಗೆ ತುಪ್ಪ ಸವರಿದ್ದಾರೆ ಎಂದು ವಿಪಕ್ಷ ನಾಯಕರ ಲಿಸ್ಟ್ ಬಿಡುಗಡೆ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನಾ ವೇಳೆ ಯಡಿಯೂರಪ್ಪ ಸರ್ಕಾರದಲ್ಲಿ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ. 45 ರೂಪಾಯಿಯ ಒಂದು ಮಾಸ್ಕ್ ಗೆ 485 ರೂಪಾಯಿ ಬಿಲ್ ಹಾಕಲಾಗಿದೆ. ಕೋವಿಡ್ ಬೆಡ್‌ನಲ್ಲೂ ಅವ್ಯವಹಾರ ಮಾಡಲಾಗಿದೆ. ಕಳ್ಳರು ಕಳ್ಳರೇ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಲೂಟಿ ಮಾಡುವ ಚಟ ಇಲ್ಲ. ನನಗೂ ಕೋವಿಡ್ ಬಂದಿತ್ತು. ಆ ವೇಳೆ ನನಗೂ 5 ಲಕ್ಷದ 80 ಸಾವಿರ ಬಿಲ್ ಮಾಡಿದ್ದಾರೆ. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ‌ ಅಥವಾ ನೋಟೀಸ್ ನೀಡಲಿ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಅಸಮಾಧಾನ ಹೊರಹಾಕಿದರು‌.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button