ಯತ್ನಾಳ್ ಹೇಳಿಕೆ: ನಮ್ಮ ಹೈಕಮಾಂಡ್ ದುರ್ಬಲವಾಗಿಲ್ಲ ಎಂದ ಶಾಸಕ ಮಹೇಶ ಟೆಂಗಿನಕಾಯಿ

ಬೆಂಗಳೂರು: ನಾವಾಗಲಿ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವನ್ನು ಅತಂತ್ರಗೊಳಿಸುವ ಕೆಲಸಕ್ಕೆ ಕೈಹಾಕುವುದಿಲ್ಲ. ಅಲ್ಲಿನ ಶಾಸಕರೇ ಪಕ್ಷ ಹಾಗೂ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾವುದೇ ಸರ್ಕಾರವನ್ನು ಕೆಡುವ ದುಸ್ಸಾಹಾಸಕ್ಕೆ ನಾವು ಮುಂದಾಗುವುದಿಲ್ಲ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಜನಾಭಿಪ್ರಾಯ ಕೊಟ್ಟು ಒಳ್ಳೆಯ ಆಡಳಿತ ಮಾಡಲಿ ಎಂದು ಅಧಿಕಾರ ಕೊಟ್ಟಿದ್ದಾರೆ. ಆದರೆ ಭ್ರಷ್ಟಾಚಾರ ಮಾಡಲಿ ಹಾಗೂ ಪೊಲೀಸ್ ಹತ್ಯೆ ಮಾಡಲಿ ಎಂದು ಹೇಳಿಲ್ಲ. ಸರ್ಕಾರ ತಾನಾಗಿಯೇ ಬಿದ್ದರೆ ನಾವು ಸನ್ಯಾಸಿಗಳಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.

ಯತ್ನಾಳ್ ಅಸಮಾಧಾನ ಕುರಿತು ಮಾತನಾಡಿದ ಅವರು ಪ್ರತಿಯೊಂದು ಅಂಶಗಳನ್ನು ಪಕ್ಷದ ಹೈಕಮಾಂಡ್ ಗಮನಿಸುತ್ತಿದೆ. ನಮ್ಮ ಹೈಕಮಾಂಡ್ ದುರ್ಬಲವಾಗಿಲ್ಲ. ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಈ ಪಾದಯಾತ್ರೆ ಎನ್ನುವ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.

Latest Indian news

Popular Stories