
Featured StoryState News
ಕಾಂಗ್ರೆಸ್ ನಿಂದ ಯುವಕರಿಗೆ “ಯುವ ನಿಧಿ” ಘೋಷಣೆ – ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500!
ಬೆಳಗಾವಿ: ಯುವಕ್ರಾಂತಿ ಸಮಾವೇಶದಲ್ಲಿ ಯುವಕರಿಗೆ ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ನೀಡಿದೆ. ಯುವ ನಿಧಿ ಯೋಜನೆಯನ್ನು ತರುವುದಾಗಿ ಹೇಳಿದೆ.
ನಿರುದ್ಯೋಗಿ ಪದವೀಧರರಿಗೆ ಈ ಯೋಜನೆಯಡಿಯಲ್ಲಿ ಮೂರು ಸಾವಿರ ರೂಪಾಯಿ ಮತ್ತು ಡಿಪ್ಲೊಮಾ ಪದವೀಧರರಿಗೆ 2000 ರೂಪಾಯಿಯನ್ನು ಎರಡು ವರ್ಷ ನೀಡಲಿದೆ ಎಂದು ಘೋಷಿಸಿದೆ.
ಅದರೊಂದಿಗೆ ರಾಜ್ಯದಲ್ಲಿ ಹತ್ತು ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಕಾಂಗ್ರೆಸ್ ಘೋಷಿಸಿದೆ.




