Hubballi

ಹುಬ್ಬಳ್ಳಿ :ಖಾಸಗಿ ಬಸ್ ಪಲ್ಟಿಯಾಗಿ 14 ಮಂದಿಗೆ ಗಾಯ

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವೊಂದು ಪಲ್ಟಿಯಾಗಿದ್ದು 14 ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಪಾಳೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸಣ್ಣಪುಟ್ಟ ಗಾಯಗೊಂಡಿದ್ದ 11 ಜನರು ಪ್ರಥಮ ಚಿಕಿತ್ಸೆ ಪಡೆದು ತೆರಳಿದ್ದು,ಹೆಚ್ಚಿನ ಗಾಯಗೊಂಡಿರುವ ಪುಣೆ, ಕೋಲ್ಕತ್ತಾ ಮತ್ತು ಹುಬ್ಬಳ್ಳಿಯ ತಲಾ ಒಬ್ಬರು ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button