ಕಾಡ್ಗಿಚ್ಚಿಗೆ 67 ಮಂದಿ ಮೃತ್ಯು – ದೃಶ್ಯಗಳು ಭಯಾನಕ

ಹವಾಯಿ: ವಿಶ್ವ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನ ಐತಿಹಾಸಿಕ ದ್ವೀಪ ರಾಜ್ಯವಾದ ಹವಾಯಿಯಲ್ಲಿ ಕಾಡ್ಗಿಚ್ಚು ಮುಂದುವರೆದಿದ್ದು ಮೃತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ, ಹವಾಯಿ ಗವರ್ನರ್ ಜೋಶ್ ಗ್ರೀನ್ ಅವರು ಇನ್ನೂ ಪತ್ತೆಯಾಗದ ಸುಮಾರು 1,000 ಜನರಿಗಾಗಿ ಹುಡುಕಾಟಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ವರದಿಯ ಪ್ರಕಾರ ಇಲ್ಲಿಯವರೆಗೆ, ಅಧಿಕಾರಿಗಳು ಕಟ್ಟಡಗಳ ಹೊರಗಿರುವ ಜನರ ಹುಡುಕಾಟ ನಡೆಯುತ್ತಿದೆ ಇನ್ನು ಕಟ್ಟಡ ಒಳಭಾಗದಲ್ಲಿ ಇರುವ ದೇಹಗಳ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ ಅದಕ್ಕಾಗಿ ಹೆಚ್ಚಿನ ರಕ್ಷಣಾ ತಂಡದ ಅಗತ್ಯ ಕೂಡ ಇದೆ ಎಂದು ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಇತರ ರಕ್ಷಣಾ ತಂಡ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದು ಇನ್ನೂ ಕೂಡ ಹತೋಟಿಗೆ ಬರಲಿಲ್ಲ ಎಂದು ಹೇಳಿದ್ದಾರೆ ಹಾಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ಏತನ್ಮಧ್ಯೆ, ಲಾಹೈನಾ ನಿವಾಸಿಗಳಿಗೆ ಹಾನಿಯನ್ನು ನಿರ್ಣಯಿಸಲು ಮೊದಲ ಬಾರಿಗೆ ಮನೆಗೆ ಮರಳಲು ಅವಕಾಶ ನೀಡಲಾಯಿತು.

ಎತ್ತ ನೋಡಿದರೂ ಸುಟ್ಟು ಕರಕಲಾಗಿರುವ ಅವಶೇಷಗಳು, ಕಟ್ಟಡ, ಮರಗಳು, ಪ್ರಾಣಿಗಳು ಸೇರಿದಂತೆ ಎಲ್ಲವೂ ಅಗ್ನಿಗೆ ಆಹುತಿಯಾಗಿದ್ದು ಪ್ರದೇಶ ತುಂಬಾ ಬೂದಿ ಆವರಿಸಿಕೊಂಡಿದೆ. ಇದು ಈ ದ್ವೀಪ ಪ್ರದೇಶದಲ್ಲಿ ನಡೆದ ದೊಡ್ಡ ಘಟನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಗ್ನಿ ಅವಘಡದಿಂದ ನಗರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ಜೊತೆಗೆ ನೆಟ್ ವರ್ಕ್ ಕಡಿತಗೊಂಡಿದೆ. ಜೊತೆಗೆ ಕಾಳ್ಗಿಚ್ಚಿಗೆ ಸುಮಾರು 1,700 ಕ್ಕೂ ಹೆಚ್ಚು ಕಟ್ಟಡಗಳು ಸುಟ್ಟು ಬೂದಿಯಾಗಿವೆ.

Latest Indian news

Popular Stories