ಹೊಸದಿಲ್ಲಿ: ಆಫ್ರಿಕನ್ ರಾಷ್ಟ್ರ ಕೀನ್ಯಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರಚಲಿತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೀನ್ಯಾದಲ್ಲಿರುವ ಭಾರತೀಯ ಪ್ರಜೆಗಳು “ಅತೀವ ಎಚ್ಚರಿಕೆ” ವಹಿಸುವಂತೆ ಭಾರತೀಯ ಹೈಕಮಿಷನ್ ಮಂಗಳವಾರ ಗೆ ಸಲಹೆ ನೀಡಿದೆ.
ಕೀನ್ಯಾದ ರಾಜಧಾನಿ ನೈರೋಬಿ ಮತ್ತು ದೇಶಾದ್ಯಂತ ಇತರ ನಗರಗಳು ಹಿಂಸಾತ್ಮಕ ಘರ್ಷಣೆಗಳು ಮತ್ತು ಪ್ರದರ್ಶನಗಳಿಗೆ ಸಾಕ್ಷಿಯಾಗಿವೆ. ಕೀನ್ಯಾ ಸಂಸತ್ತು ತೆರಿಗೆಗಳನ್ನು ಹೆಚ್ಚಿಸಲು ಪ್ರಸ್ತಾಪಿಸಿದ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಿದ ನಂತರ ಜನರು ಬೀದಿಗಿಳಿದು ಹಿಂಸಾಚಾರ ಆರಂಭಿಸಿದ್ದಾರೆ.
“ಪ್ರಚಲಿತ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೀನ್ಯಾದಲ್ಲಿರುವ ಎಲ್ಲಾ ಭಾರತೀಯರು ಅತ್ಯಂತ ಜಾಗರೂಕರಾಗಿರಲು, ಅನಿವಾರ್ಯವಲ್ಲದ ಚಲನೆಯನ್ನು ನಿರ್ಬಂಧಿಸಲು ಮತ್ತು ಪರಿಸ್ಥಿತಿಯನ್ನು ತೆರವುಗೊಳಿಸುವವರೆಗೆ ಪ್ರತಿಭಟನೆಗಳು ಮತ್ತು ಹಿಂಸಾಚಾರದಿಂದ ಪ್ರಭಾವಿತವಾಗಿರುವ ಪ್ರದೇಶಗಳನ್ನು ತಪ್ಪಿಸಿ ಇರುವಂತೆ ಸೂಚಿಸಲಾಗಿದೆ” ಎಂದು ಭಾರತೀಯ ಹೈಕಮಿಷನ್ ಸಲಹೆಯಲ್ಲಿ ತಿಳಿಸಿದೆ.
ಕೈ ಮೀರಿ ಹೋದ ಸ್ಥಿತಿ ಇರುವ ಕಾರಣ ದಯವಿಟ್ಟು ಸ್ಥಳೀಯ ಸುದ್ದಿಗಳು ಮತ್ತು ಹೈಕಮಿಷನ್‌ನ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಬಳಸಿ” ಎಂದು ಭಾರತೀಯರಿಗೆ ಹೈಕಮಿಷನ್ ಸಲಹೆ ನೀಡಿದೆ.
ಕೀನ್ಯಾದ ಸಂಸತ್ತಿಗೆ ಸಾವಿರಾರು ಉದ್ರಿಕ್ತರು ನುಗ್ಗಿ ಬೆಂಕಿ ಹಚ್ಚಿದ ನಂತರ ಪೊಲೀಸರು ಅಶ್ರುವಾಯು ಮತ್ತು ಲೈವ್ ರೌಂಡ್‌ಗಳನ್ನು ಬಳಸಿದ್ದರಿಂದ ನೈರೋಬಿಯಲ್ಲಿ ಕನಿಷ್ಠ ಐದು ಪ್ರತಿಭಟನಾಕಾರರು ಹತ್ಯೆಗೀಡಾಗಿದ್ದಾರೆ. 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.