ಮಿಜೋರಾಂ : ನೂತನ ಮುಖ್ಯಮಂತ್ರಿಯಾಗಿ ZPM ನಾಯಕ ಲಾಲ್ದುಹೋಮಾ ಪ್ರಮಾಣ ವಚನ ಸ್ವೀಕಾರ

ಜೋರಾಂ: ಮಿಜೋರಾಂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಝಡ್ಪಿಎಂ ನಾಯಕ ಲಾಲ್ದುಹೋಮಾ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ಮಂಗಳವಾರ, ಝಡ್ಪಿಎಂ ಶಾಸಕಾಂಗ ಪಕ್ಷವು ಲಾಲ್ದುಹೋಮಾ ಅವರನ್ನು ತನ್ನ ನಾಯಕರಾಗಿ ಮತ್ತು ಕೆ ಸಪ್ದಂಗಾ ಅವರನ್ನು ಉಪನಾಯಕರಾಗಿ ಆಯ್ಕೆ ಮಾಡಿತು.40 ಸದಸ್ಯರ ಮಿಜೋರಾಂ ಮುಖ್ಯಮಂತ್ರಿ ಸೇರಿದಂತೆ 12 ಮಂತ್ರಿಗಳನ್ನು ಹೊಂದಬಹುದು.

ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಅನ್ನು ಸೋಲಿಸುವ ಮೂಲಕ 2023 ರ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಝೋರಾಂ ಪೀಪಲ್ಸ್ ಮೂವ್ಮೆಂಟ್ (ಝಡ್ಪಿಎಂ) ಮುಖಂಡ ಲಾಲ್ದುಹೋಮಾ ಅವರು ಇಂದು ಮಿಜೋರಾಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Latest Indian news

Popular Stories