Kalaburagi

ಕಲಬುರಗಿ ಕೇಂದ್ರ ಕಾರಾಗೃಹ: ಸನ್ನಡತೆ ತೋರಿದ ೧೮ ಜೈಲು ಹಕ್ಕಿಗಳು ಬಿಡುಗಡೆ

ಕಲಬುರಗಿ,ಮೇ.೨೬(ಕ.ವಾ)-ಕಳೆದ ೧೪ ವರ್ಷಗಳಿಂದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬಂದಿಖಾನೆಯಲ್ಲಿದ್ದ ೧೮ ಕೈದಿಗಳಿಗೆ ಬುಧವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಭಾಗ್ಯ ದೊರೆಯಿತು.

ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಹಲವಾರು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳಿಗೆ ಬಿಡುಗಡೆ ಪತ್ರ ನೀಡಿ ಮಾತನಾಡಿದ ಕಾರಾಗೃಹದ ಮುಖ್ಯ ಅಧೀಕ್ಣಕ ಪಿ.ಎಸ್.ರಮೇಶ ರಾಜ್ಯ ಸರ್ಕಾರದ ನಿರ್ದೇಶನದಂತೆ ಸನ್ನಡತೆಯ ಆಧಾರದ ಮೇಲೆ ೧೬ ಪುರುಷರು ಮತ್ತು ೨ ಮಹಿಳಾ ಸೇರಿದಂತೆ ೧೮ ಕೈದಿಗಳನ್ನು ಇಂದು ಬಂಧಮುಕ್ತಗೊಳಿಸಲಾಗಿದೆ ಎಂದರು.

ಇAದು ಬಿಡುಗಡೆಗೊಂಡ ಕೈದಿಗಳಿಗೆ ಕಾರಾಗೃಹದಲ್ಲಿ ವೃತ್ತಿಪರ ತರಬೇತಿಗಳಾದ ಕಾರ್ಖಾನೆ, ನೇಯಿಗೆ, ಬಡಿಗೆ, ಕೃಷಿ, ತೋಟಗಾರಿಕೆ ಸೇರಿದಂತೆ ಹಲವಾರು ಸ್ವಾವಲಂಬನೆಯ ಬದುಕು ಸಾಗಿಸಲು ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ಲಾಕ್ ಡೌನ್ ಪ್ರಯುಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಸುತ್ತಮುತ್ತಲಿನ ಊರಿನ ಕೈದಿಗಳನ್ನು ಕರೆದುಕೊಂಡು ಹೋಗಲು ಅವರ ಸಂಬAಧಿಕರು ತಂದಿರುವ ಸ್ವಂತ ವಾಹನ ಮೂಲಕ ತೆರಳುತ್ತಿದ್ದಾರೆ. ಇನ್ನು ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಇಲ್ಲದ ಕೈದಿಗಳಿಗೆ ಕಾರಾಗೃಹದ ವಾಹನದ ಮೂಲಕ ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ ವಿವರಿಸಿದರು.

ಬಿಡುಗಡೆಗೊಂಡ ಕೈದಿಗಳ ವಿವರ : ಪಿ. ಕುಮಾರಸ್ವಾಮಿ ತಂದೆ ಪುಟ್ಟಸ್ವಾಮಿಗೌಡ, ರಶೀದ್ @ರಶೀದ್ ಖಾನ್ ತಂದೆ ಹೈದರ್ ಖಾನ್, ಯಲಗೊಂಡ ತಂದೆ ಸಿದ್ದಪ್ಪ, ಶರಣು @ಶರಣಬಸವ ತಂದೆ ಹನುಮಂತಪ್ಪ, ಸಯ್ಯದ್ ಮೊಹಮ್ಮದ್ ಪಾಶಾ ತಂದೆ ಗುಲಾಮ ಮೊಹಮ್ಮದ್, ಮಲ್ಲಣ್ಣ ತಂದೆ ಸಿದ್ದಣ್ಣ ಪಾಟೀಲ, ಮರಗಪ್ಪ ತಂದೆ ಸಾಬಣ್ಣ ಡೊಳ್ಳೆನೂರ, ಮರಗಪ್ಪ ತಂದೆ ಮಾರ್ಕಪ್ಪ ಬಾತಪ್ಪನೂರ, ಬಸವರಾಜ ತಂದೆ ಮಾಣ ಕರಾವ್, ರೇವಣಸಿದ್ದಪ್ಪ ತಂದೆ ಸಾಯಿಬಣ್ಣಪ್ಪ, ಗೋಪಾಲನಾಯ್ಕ್ ತಂದೆ ರೇಖ್ಯಾನಾಯ್ಕ, ಕಲ್ಲಪ್ಪ ತಂದೆ ಚನ್ನಮಲ್ಲಪ್ಪ ಕಾಡಾ, ಸಂಗಪ್ಪ ತಂದೆ ಹುಸೇನಪ್ಪ, ಸಣ್ಣ ಮುದುಕಪ್ಪ ತಂದೆ ನಿಂಗಪ್ಪ, ಚಂದಪ್ಪ ತಂದೆ ಲಾಲ್ ಸಿಂಗ್, ಸಾಬಣ್ಣ ತಂದೆ ನಿಂಗಪ್ಪ ಮಾಸ್ತರ್, ಶೆಟ್ಟವ್ವ ಗಂಡ ತಿಮ್ಮಣ್ಣ ಹಾಗೂ ಲಕ್ಷ್ಮಿ ಗಂಡ ಲಕ್ಷ್ಮಣ ವಡ್ಡರ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button