ವೈದ್ಯರು ಹಾಗೂ ಶುಶ್ರೂಷಕರ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ

ಕಲಬುರಗ
.ಮೇ.೦೭.(ಕ.ವಾ)-ಕೋವಿಡ್-೧೯ ಸಾಂಕ್ರಾಮಿಕ ರೋಗದ ನಿರ್ವಹಣೆಗಾಗಿ ಜಿಲ್ಲೆಯ ತಾಲೂಕಾ ಆಸ್ಪತ್ರೆಗಳಲ್ಲಿ ರಚಿಸಲಾದ ಐ.ಸಿ.ಯು.ಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ನಿರ್ವಹಿಸಲು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಆರು ತಿಂಗಳ ಅವಧಿಗೆ ವೈದ್ಯರು, ಶುಶ್ರೂಷಕರು ಹಾಗೂ ಗ್ರೂಪ್ “ಡಿ” ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ೨೦೨೧ರ ಮೇ ೧೦ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ (ವಾಕ್-ಇನ್-ಇಂಟರ್‌ವ್ಯೂವ್) ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿಗಳ ಅನುಮೋದನೆದನ್ವಯ ಜಿಲ್ಲೆಯ ತಾಲೂಕಾ ಮಟ್ಟದ ಆಸ್ಪತ್ರೆಗಳಾದ ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪೂರ, ಜೇವರ್ಗಿ ಹಾಗೂ ಸೇಡಂಗಳಲ್ಲಿ ರಚಿಸಲಾದ ಐ.ಸಿ.ಯು. ಹಾಗೂ ಆಮ್ಲಜನಕ ಬೆಂಬಲಿತ ಹಾಸಿಗೆಗಳ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಈ ಕೆಳಕಂಡ ಹುದ್ದೆಗಳನ್ನು ಮೇರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನ ಏರ್ಪಡಿಸಲಾಗಿದೆ.

೧೮ ಜನ ವೈದ್ಯರು ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ., ಎಂ.ಬಿ.ಬಿ.ಎಸ್. ಅಂಕಪಟ್ಟಿ, ಇಂಟರ್‌ಶಿಪ್ ಮತ್ತು ಕೆ.ಎಮ್.ಸಿ. ರೇಜಿಸ್ಟೆçÃಷನ್ ಪ್ರ.ಪತ್ರದ ಶೈಕ್ಷಣ ಕ ದಾಖಲೆಗಳನ್ನು ಹೊಂದಿರಬೇಕು. ಪ್ರತಿ ಮಾಹೆ ೬೦,೦೦೦ ರೂ.ಗಳ ವೇತನ ನೀಡಲಾಗುತ್ತದೆ. ವಯೋಮಿತಿ ೪೭ ವರ್ಷದೊಳಗಿರಬೇಕು.

೧೮ ಜನ ಶುಶ್ರೂಷಕರು ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ., ಡಿಪ್ಲೋಮಾ/ಬಿ.ಎಸ್ಸಿ ನರ್ಸಿಂಗ್ ಅಂಕಪಟ್ಟಿ, ಶುಶ್ರೂಷಕ ನೋಂದಣ ಪ್ರ.ಪತ್ರದ ಶೈಕ್ಷಣ ಕ ದಾಖಲಾತಿಗಳು ಹೊಂದಿರಬೇಕು. ಮಾಸಿಕ ೨೫,೦೦೦ ರೂ.ಗಳ ವೇತನ ನೀಡಲಾಗುತ್ತದೆ. ವಯೋಮಿತಿ ೪೦ ವರ್ಷದೊಳಗಿರಬೇಕು.

೧೮ ಜನ ಗ್ರೂಪ್ “ಡಿ” ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಶೈಕ್ಷಣ ಕ ದಾಖಲೆ ಹೊಂದಿರಬೇಕು. ಮಾಸಿಕ ೧೫,೦೦೦ ರೂ.ಗಳ ವೇತನ ನೀಡಲಾಗುತ್ತದೆ. ವಯೋಮಿತಿ ೪೦ ವರ್ಷದೊಳಗಿರಬೇಕು.

ಇಚ್ಛೆಯುಳ್ಳ ಅಭ್ಯರ್ಥಿಗಳು ಶೈಕ್ಷಣ ಕ ಮೂಲ ದಾಖಲಾತಿ ಮತ್ತು ಜೇರಾಕ್ಸ್ ದಾಖಲಾತಿಗಳೊಂದಿಗೆ ಹಾಗೂ ಪಾಸ್‌ಪೋರ್ಟ ಸೈಜ್ ಭಾವಚಿತ್ರದೊಂದಿಗೆ ಮೇಲ್ಕಂಡ ದಿನದಂದು ಸಂದರ್ಶನಕ್ಕೆ ಹಾಜರಾಗಬೇಕು. ನಂತರ ಬಂದ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದೂರವಾಣ ಸಂಖ್ಯೆ ೦೮೪೭೨-೨೭೮೬೧೮ಗೆ ಸಂಪರ್ಕಿಸಲು ಕೋರಲಾಗಿದೆ.

Latest Indian news

Popular Stories