Kodagu

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕೊಡಗು ಜಿಲ್ಲೆಗೆ ಭೇಟಿ

ಬ್ರಾಹ್ಮಣ ಸಂಘಟನೆಗಳ ಕಚೇರಿಗೆ ಭೇಟಿ.. ಸಂಘಟನೆ ಬಲಪಡಿಸಲು ಕರೆ
ಇಂದು ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಗೋಣಿಕೊಪ್ಪಲಿನ ವಿಪ್ರ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಾಹಾಸಭಾದ ಉಪಾಧ್ಯಕ್ಷರಾದ ನಿವೃತ್ತ ಎ.ಡಿ.ಜಿ.ಪಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಸೇವಿ ಸಲ್ಲಿಸಿದ್ದ ಭಾಸ್ಕರ್ ರಾವ್ ಆಗಮಿಸಿದ್ದರು. ಈ ಸಂದರ್ಭ ಭಾಸ್ಕರ ರಾವ್ ಹಾಗೂ ಅವರೊಂದಿಗೆ ಆಗಮಿಸಿದ ಬ್ರಾಹ್ಮಣ ಮಹಾ ಸಭದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ರವೀಂದ್ರ ರವರನ್ನು ಸಂಘದ ವತಿಯಿಂದ ಸ್ವಾಗತಿಸಲಾಯಿತು. ನಂತರ ನಡೆದ ಔಪಚಾರಿಕ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಸ್ಕರ್ ರಾವ್ ಅವರು ಪ್ರತಿಯೊಬ್ಬರೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಪಡೆದುಕೊಳ್ಳುವಂತಾಗಬೇಕು, ಸದಸ್ಯತ್ವ ಹಣ ಪಾವತಿಸಲು ಸಾಧ್ಯವಾಗದವರು ಕೂಡ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ. ತಾವೇ ಅವರ ಸದಸ್ಯತ್ವ ಹಣ ಪಾವತಿಸಿ ಸದಸ್ಯತ್ವ ನೀಡುವುದಾಗಿ ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಅದರ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಅವರ ನೇತೃತ್ವದಲ್ಲಿ ಇದೀಗ ಬ್ರಾಹ್ಮಣರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ತರಲಾಗಿದೆ ಸ್ಕಾಲರ್ಶಿಪ್, ಮೆಡಿಕಲ್ ಸೌಲಭ್ಯ, ವೃದ್ಯಾಪಿ ವೇತನ, ಕಾನೂನಿನ ನೆರವು, ದುರ್ಬಲರಿಗೆ ಆರ್ಥಿಕ ನೆರವು,ಕೃಷಿ,ವ್ಯಾಪಾರ, ಉದ್ಯೋಗ, ಉನ್ನತ ಪದವಿ ಹೀಗೆ ಹಲವು ಘಟಕಗಳ ಮೂಲಕ ಸಂಘದಿಂದ ಯೋಜನೆಗಳನ್ನು ರೂಪಿಸಲಾಗಿದ್ದು ಇದರ ಉಪಯೋಗವನ್ನು ರಾಜ್ಯದ ಎಲ್ಲ ಬ್ರಾಹ್ಮಣರು ಪಡೆಯುವಂತೆ ತಿಳಿಸಿದರು. ಕೊಡಗಿನಿಂದ ಪ್ರತಿಯೊಬ್ಬ ವಿಪ್ರ ಭಾಂದವರು ಸದಸ್ಯತ್ವ ಪಡೆಯಬೇಕೆಂದು ಮನವಿ ಮಾಡಿಕೊಂಡರು. ಇದೀಗ ಸಾಮಾಜಿಕವಾಗಿ ಅತಿ ಹೆಚ್ಚು ಅವಹೇಳನಕ್ಕೆ ನಮ್ಮ ಬ್ರಾಹ್ಮಣರನ್ನು ಗುರಿ ಮಾಡುತ್ತಿದ್ದರು ನಾವು ನಮ್ಮ ತಾಳ್ಮೆಯನ್ನು ಇನ್ನು ಜೀವಂತವಾಗಿ ಇಟ್ಟಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಯಾವುದಕ್ಕೂ ಪ್ರತಿರೋಧ ವ್ಯಕ್ತಪಡಿಸದೆ ನಮ್ಮತನವನ್ನು ನಾವು ಕಾಪಾಡಿಕೊಂಡಿರುವುದು ಸಾಕ್ಷಿ ಎಂದರು. ಬ್ರಾಹ್ಮಣ ಸಂಘಟನೆಯ ಮಹತ್ವದ ಬಗೆ ಈ ಸಂದರ್ಭ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಅಧ್ಯಕ್ಷರಾದ ಪ್ರಭಾಕರ್ ನೆಲ್ಲಿತ್ತಾಯ ವಹಿಸಿದ್ದರು, ಇದೆ ಸಂದರ್ಭ ರಾಜ್ಯ ಸಂಘಟನೆಯ ಪರವಾಗಿ ಆಗಮಿಸಿದ ಮೈಸೂರಿನ ರವೀಂದ್ರ ಅವರು ರಾಜ್ಯ ಸಂಘದ ಪರಿಚಯವನ್ನು ಪ್ರಸ್ತಾವಿಕವಾಗಿ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ವಿಪ್ರ ಯುವ ಸಂಘದ ಸ್ಥಾಪಕ ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಮಂಡಳಿ ಸದಸ್ಯರಾದ ಶ್ರೀಧರ್ ನಲ್ಲಿತ್ತಾಯ ರವರು ಉಪಸ್ಥಿತರಿದ್ದರು, ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ರಾಜ್ಯ ಸಂಘದ ಪರವಾಗಿ ಪ್ರಭಾಕರ್ ನೆಲಿತ್ತಾಯ ಹಾಗೂ ಶಿವಪ್ರಸಾದ್ ರವರನ್ನು ಶಾಲು ಹೊದಿಸಿ ರಾಜ್ಯ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಸನ್ಮಾನಿಸಿದರು. ಕೊಡಗು ಬ್ರಾಹ್ಮಣ ಕ್ಷೇಮಾಭಿವೃದ್ಧಿ ನದಿಯ ಪದಾಧಿಕಾರಿಗಳು, ಭಗವತಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮಿ ಮತ್ತು ಪದಾಧಿಕಾರಿಗಳು, ರಾಜ್ಯ ವಿಪ್ರ ಮಹಿಳಾ ಘಟಕದ ಕಾರ್ಯಕಾರಣಿ ಸಮಿತಿ ಸದಸ್ಯರಾದ ಸವಿತಾ ಯೋಗೀಶ್ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button