ಕೊಡಗಿನಲ್ಲಿ ಎರಡು ದಿನ ಈದುಲ್ ಫಿತರ್ !

ಕೊಡಗು: ಜಿಲ್ಲೆಯಲ್ಲಿ ಎರಡು ದಿನ ಈದ್ ಉಲ್ ಫಿತರ್ ಆಚರಣೆ ಘೋಷಣೆಯಾಗಿದೆ. ದ.ಕದ ಖಾಝಿಯವರ ಘೋಷಣೆಯ ನಂತರ ಶಾಫಿ ಪಂಗಡದವರು ನಾಳೆ ಬುಧವಾರ ಈದ್ ಆಚರಿಸಲಿದ್ದಾರೆ.

ಇನ್ನುಳಿದಂತೆ ಹನಫೀ ಪಂಗಡವರು ಬೆಂಗಳೂರಿನ ಖಾಝಿಗಳ ಘೋಷಣೆಯಂತೆ ಕೊಡಗಿನ ಹಲವು ಮಸೀದಿಗಳಲ್ಲಿ ಗುರುವಾರ ಆಚರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಶವ್ವಾಲ್ ತಿಂಗಳ ಚಂದ್ರ ದರ್ಶನದ ನಂತರವೇ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ.

Latest Indian news

Popular Stories