
Kodagu
ವಿದ್ಯುತ್ ಸ್ಪರ್ಶ; ಅಸ್ಸಾಂ ಮೂಲದ ಕಾರ್ಮಿಕ ಸಾವು
………………. THG KANNADA……………..
ಕೊಡಗು ಜಿಲ್ಲೆಯ ಮೂರ್ನಾಡು ಗ್ರಾಮದ ಕಾಂತೂರು ಎಂಬಲ್ಲಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಸ್ಸಾಂ ರಾಜ್ಯದ ಕಾರ್ಮಿಕ ಫಲೊರುದ್ದೀನ್ ರವರ ಪುತ್ರ ಜಹಾದ್ ಅಲೀ (40) ಎಂಬವರು ವಿದ್ಯುತ್ ತಂತಿ ಬಾಳೆ ಗಿಡದ ಮೇಲೆ ಹರಿದ ಬಗ್ಗೆ ತಿಳಿಯದೆ ಅದನ್ನು ಮುಟ್ಟದ್ದರಿಂದ ಕುಸಿದು ಬಿದ್ದಿದ್ದು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದು ದಾರಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ,
ಕೆ.ಇ.ಬಿ ನಿರ್ಲಕ್ಷ್ಯ ಆರೋಪ
ಈ ಸಂಧರ್ಭದಲ್ಲಿ ಆಸ್ಪತ್ರೆಗೆ ಆಗಮಿಸಿದ ತೊಟದ ವೈವಸ್ಥಾಪಕ ಪ್ರತಿಕ್ರಿಯಿಸಿ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಮರ ಗಿಡಗಳ ಹಾದು ಹೋಗಿದ್ದ ಕೆ,ಇ.ಬಿಗೆ ಲಿಖಿತ ದೂರು ನೀಡಿದ್ದರು ನಿರ್ಲಕ್ಷ್ಯ ಮಾಡಿರುತ್ತಾರೆ ಎಂದು ಹೇಳಿದರು




