ಜಾತಿ ಜನಾಂಗದ ಬಗ್ಗೆ ವೈಷಮ್ಯ ಬಿತ್ತುವ ಸುಳ್ಳು ಪೋಸ್ಟ್ ರವಾನೆ :ಇಬ್ಬರ ವಿರುದ್ಧ ನಾಪೋಕ್ಲು ಠಾಣೆಯಲ್ಲಿ FIR ದಾಖಲು

ವಾಟ್ಸಾಪ್ ಗ್ರೂಪಿನಲ್ಲಿ ನಿರಂತರವಾಗಿ ಜಾತಿ ಜನಾಂಗದ ಮಧ್ಯೆ ವೈಷಮ್ಯ ಮೂಡಿಸುವ ಪೋಸ್ಟ್ ಗಳನ್ನು ಹರಿಯಬಿಡುತ್ತಿದ್ದ ಇಬ್ಬರು ಕಿಡಿಗೇಡಿಗಳ ಮೇಲೆ ನಾಪೋಕ್ಲು ಪೋಲೀಸರು FIR ದಾಖಲಿಸಿದ್ದಾರೆ.

BOYS CORNER ಮತ್ತು Napoklu Hindus ಎಂಬ ಸಾರ್ವಜನಿಕ ವಾಟ್ಸಾಪ್ ಗ್ರೂಪಿನಲ್ಲಿ ಅನೇಕ ದಿನಗಳಿಂದ ಸಜನ್ ಗಣಪತಿ ಹಾಗೂ Gaill ಕವನ್ ಎಂಬ ಆರೋಪಿಗಳು ಜಾತಿಗಳ ಮೇಲೆ ಸಮಾಜದ ಮೇಲೆ ಜನಾಂಗೀಯ ವೈಷಮ್ಯ ಉಂಟು ಮಾಡುವ ಪೋಸ್ಟ್ ಗಳನ್ನು ಹರಿಯ ಬಿಡುವ ಮೂಲಕ ತಮ್ಮ ವಿಕೃತ ಚೇಷ್ಟೆ ಪ್ರದರ್ಶನ ಮಾಡುತ್ತಿದ್ದರು.

ಇವರ ಖಾತೆಯ ಬಗ್ಗೆ ನಿಗಾವಹಿಸಿದ್ದ ಪೋಲಿಸ್ ಇಲಾಖೆ ದಿನಾಂಕ 10-4-2024 ರಂದು ಸಾಕ್ಷಿಸಮೇತ ಪತ್ತೆ ಹಚ್ಷಿ IPC ಸೆಕ್ಷನ್ 505(2) ರಲ್ಲಿ FIR ದಾಖಲಿಸಿದ್ದಾರೆ.

ಪೋಲಿಸ್ ಅಧಿಕಾರಿ ಶರತ್ ಕುಮಾರ್ .ಹೆಚ್.ಎಸ್.ದೂರಿನನ್ವಯ ಕೇಸ್ ದಾಖಲಾಗಿದೆ.

Latest Indian news

Popular Stories