ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಸತೀಶ್ ದಾವಣಗೆರೆ ಬಂಧನ ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ವಿರಾಜಪೇಟೆಯಲ್ಲಿ ಪ್ರತಿಭಟನೆ

ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣಗೆರೆ ಅವರ ಬಂಧನ ಖಂಡಿಸಿ ವಿರಾಜಪೇಟೆ ನಗರದಲ್ಲಿ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.


ಹಿಂದೂ ಜಾಗರಣ ವೇದಿಕೆ ವಿರಾಜಪೇಟೆ ತಾಲ್ಲೂಕು ಘಟಕದ ವತಿಯಿಂದ ಗಡಿಯಾರ ಕಂಭದ ಬಳಿ ಸಂಘಟನೆ ಪ್ರಮುಖ ಸತೀಶ್ ದಾವಣಗೆರೆ ಬಂದನ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಯುವ ವಾಹಿನಿಯ ಜಿಲ್ಲಾ ಸಂಯೋಜಕ್ ಸುನೀಲ್ ಮಾದಪುರ ಅವರು ಹಿಂದೂಗಳನ್ನು ಧಮನ ಮಾಡುವ ಷಡ್ಯಂತರವಾಗುತ್ತಿದೆ ರಾಜ್ಯದಲ್ಲಿ. ಹಿಂದೂ ಸಂಘಟನೆ ಗಳು ಧರ್ಮ ದೇಶ ರಕ್ಷಣೆಯಲ್ಲಿ ತೊಡಗಿದ್ದು ಯಾವುದೇ ದೇಶ ದ್ರೋಹಿ ಕೃತ್ಯಗಳಲ್ಲಿ ಭಾಗಿಗಳಾಗಲಿಲ್ಲಾ.ಸಂಘಟನೆಯ ಶಕ್ತಿಯನ್ನು ಕುಗ್ಗಿಸುವ ಹುನ್ನಾರ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಗೌರಿಬಿದನೂರು ನಲ್ಲಿ ನಡೆದ ಆಖಂಡ ಬಾರತ ಸಂಕಲ್ಪ ದಿನದ ಅಂಗವಾಗಿ ಅಯೋಜಿಸಲಾಗಿದ್ದಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಪ್ರಾಂತ ಪ್ರಮುಖರಾದ ಸತೀಶ್ ದಾವಣಗೆರೆ ಅವರ ಭಾಷಣವು ಪ್ರಚೋದನಕಾರಿ ಅಗಿತ್ತು ಎಂದು ಪೊಲೀಸರು ಪ್ರಮುಖ ರನ್ನು ಬಂದಿಸಿದ್ದಾರೆ.ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ. ಬಂದಿಸಿದ ಪ್ರಮುಖರನ್ನು ಬಿಡುಗಡೆಗೊಳಿಸಬೇಕು. ಪ್ರಕರಣವನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದರು.


ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕರಾದ ಯೋಗೇಶ್ ಬಿಟ್ಟಂಗಾಲ, ಅನೀಲ್ ಸಿದ್ದಾಪುರ, ತಾಲೂಕು ಸಂಯೋಜಕರಾದ ಗಣೇಶ್ ಬಿಟ್ಟಾಂಗಲ,ಜಯೇಶ್ ಮತ್ತು ಸಂಘಟನೆಯ ಕಾರ್ಯಕರ್ತರು ಹಾಗೂ ವಿಶ್ವ ಹಿಂದೂ ಪರಿಷತ್,ಆರ್.ಎಸ್.ಎಸ್, ಭಜರಂಗದಳ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಗಳಾದರು.

ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಸರಕಾರಿ ಅಧಿಕಾರಿ ಬಂಧನ

The Hindustan Gazette

Latest Indian news

Popular Stories