ಕೊಡಗು: ಐತಿಹಾಸಿಕ ಜನರಲ್ ತಿಮ್ಮಯ ಸ್ಮಾರಕಕ್ಕೆ ಬಸ್ ಡಿಕ್ಕಿ – ಹಾನಿ

ಕೊಡಗು ಜಿಲ್ಲೆಯ ಐತಿಹಾಸಿಕ ಜನರಲ್ ತಿಮ್ಮಯ ಸ್ಮಾರಕ ಇಂದು ಬೆಳಗಿನ ಜಾವದಲ್ಲಿ ವೇಗವಾಗಿ ಬಂದ ಕೆ.ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾದ ಪರಿಣಾಮ ಧರೆಗುರುಳಿ ಬಿದ್ದಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ತಾತ್ಕಾಲಿಕವಾಗಿ ಪ್ರತಿಮೆಯನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಮ್’ಗೆ ಪ್ರತಿಮೆ ಸ್ಥಳಾಂತರಿಸಲಾಗಿದೆ. ಎಪ್ಪತ್ತರ ದಶಕದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಎಮ್.ಸಿ ನಾಣಯ್ಯ ಅವರು ಪುರಸಭೆ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಮುತುವರ್ಜಿ ವಹಿಸಿ ನಿರ್ಮಿಸಿದ್ದರು.ಫೀಲ್ಡ್ ಮಾರ್ಷಲ್ ಮಾನಿಕ್ಷ ಉದ್ಘಾಟಿಸಿದ್ದರು.

ಈಗಾಗಲೇ ಶಾಸಕರಿಗೆ ವಿಚಾರ ತಿಳಿಸಿದ್ದು ಇದೇ ಸ್ಥಳದಲ್ಲಿ ಪ್ರತಿಮೆಯನ್ನು ಪುನರ್ ಸಂಸ್ಥಾಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

IMG 20230821 WA0008 1 Kodagu
IMG 20230821 WA0022 Kodagu

Latest Indian news

Popular Stories