ಕೊಡಗು: ಅತ್ಯಾಚಾರ, ಕೊಲೆ ಅಪ್ರಾಪ್ತ ವಯಸ್ಸಿನ ಸಂತ್ರಸ್ಥೆಯ ಫೊಟೊ ಬಳಕೆ – ಪತ್ರಕರ್ತರಿಗೆ ಜೈಲು

ಸಿದ್ದಾಪುರದ ಪತ್ರಕರ್ತ ವಸಂತ್ ಕುಮಾರ್ ಮತ್ತು ಕಾವೇರಿ ಟೈಮ್ಸ್ ಸಂಪಾದಕ ನಂಜಪ್ಪನಿಗೆಒಂದು ವರ್ಷ ಜೈಲು ಹಾಗೂ
25,000 ರೂ. ದಂಡ ವಿಧಿಸಿದ ನ್ಯಾಯಾಲಯ.

2019 ರಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕಣದ ಸುದ್ದಿಯನ್ನು ಸಿದ್ದಾಪುರದ ವಸಂತ್ ಕುಮಾರ್ ಎಂಬಾತ ತಾನು ವರದಿಗಾರನಾಗಿದ್ದ ಕಾವೇರಿ ಟೈಮ್ಸ್ ಪತ್ರಿಕೆಯಲ್ಲಿ ಕಾನೂನುಬಾಹಿರವಾಗಿ ಬಾಲಕಿಯ ಫೋಟೋ ಬಳಸಿ ಸುದ್ದಿ ಮಾಡಿದ್ದರು.

ಅಪ್ರಾಪ್ತೆಯ ಸಹೋದರ ನೀಡಿದ ದೂರಿನ ಮೇರೆಗೆ ವಸಂತ್ ಹಾಗೂ ಕಾವೇರಿ ಟೈಮ್ಸ್ ಪತ್ರಿಕೆಯ ಮಾಲಿಕ ನಂಜಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಮುಗಿಸಿದ ವಿರಾಜಪೇಟೆಯ ಮಾನ್ಯ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಅವರು ಆರೋಪಿಗಳಾದ ವಸಂತ್ ಹಾಗೂ ನಂಜಪ್ಪ ಎಂಬುವವರಿಗೆ ಒಂದು ವರ್ಷದ ಸಜೆ ಮತ್ತು 25,000ರೂ. ದಂಡ ವಿಧಿಸಿದೆ.

Latest Indian news

Popular Stories