ಕಾಡಾನೆ ದಾಳಿಗೆ ತುತ್ತಾದ ಕಾರು: ಅಪಾಯದಿಂದ ದಂಪತಿ ಪಾರು

ಚಲಿಸುತ್ತಿದ್ದ ಕಾರಿನಲ್ಲಿದ್ದ ದಂಪತಿ ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ.. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮತ್ತಿಕಾಡುವಿನ ಕೋರನ ಟಿಪ್ಪು ಎಂಬುವವರು ಬೆಂಜ್ ಕಾರಿನಲ್ಲಿ ಪತ್ನಿಯೊಂದಿಗೆ ಸುಂಟಿಕೊಪ್ಪದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗಮಧ್ಯದ ಕುಟ್ಟೋಟ್ಟಿ ಲೈನ್ ಮನೆ ಸಮೀಪ ಕಾಡಾನೆಯೊಂದು ಆಡ್ಡಗಟ್ಟಿದೆ.

ಇದರ ಸುಳಿವರಿತ ಟಿಪ್ಪು ಮತ್ತು ಅವರ ಪತ್ನಿ ಶರವೇಗದಲ್ಲಿ ಕಾರಿನಿಂದ ಇಳಿದು ಪಲಾಯನಗೈದು ಜೀವ ಉಳಿಸಿಕೊಂಡಿದ್ದಾರೆ. ದಂತದಿಂದ ಕಾರಿನ ಬಾನೆಟ್ ಅನ್ನು ಗುದ್ದಿ ಹಾನಿಪಡಿಸಿ ಸಲಗ ತನ್ನ ಸಿಟ್ಟನ್ನು ತೀರಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದೆ. ಮತ್ತಿಕಾಡು ವ್ಯಾಪ್ತಿಯ ತೋಟಗಳಲ್ಲಿ ಇಂದು ಬೆಳಗ್ಗೆಯಿಂದ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಯುತ್ತಿದ್ದು ಈ ವೇಳೆ ಓಡಿಬಂದ ಸಲಗ, ಎದುರು ಸಿಕ್ಕಿದ ಕಾರಿನ ಮೇಲೆ ಎರಗಿದೆ.

Latest Indian news

Popular Stories