ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕರ್ನಾಟಕದ 27 ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಂದ್ ಗೆ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಕೊಡಗಿನ ಎಲ್ಲಾ ಕಡೆಗಳಲ್ಲೂ ಕೂಡ ಯಥಾ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಅಂಗಡಿ ಮುಂಗಟುಗಳು ತೆರೆದಿದೆ ವಾಹನ ಸಂಚಾರ ಎಂದಿನಂತೆ
ಸಾಗಿದೆ. ಕುಶಾಲನಗರದಲ್ಲಿ ಕೃಷ್ಣ ಅವರ ನೇತೃತ್ವದ ಕನ್ನಡ ಕಾವಲು ಪಡೆ ಬೆಳಿಗ್ಗೆ 10.30 ಗಂಟೆಗೆ ಅರಬೆತ್ತಲೆ ಮೆರವಣಿಗೆ ಹಾಗೂ ಕಾವೇರಿ ನೀರಿನಲ್ಲಿ ನಿಂತು ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಉಳಿದಂತೆ ಜಿಲ್ಲಾಧ್ಯಂತ ಕರ್ನಾಟಕ ಬಂದ್ ಬಿಸಿ ತಟ್ಟಿಲ್ಲ.