
Kodagu
Kodagu | ಕೊಯನಾಡು ಶಾಲೆ ಮೇಲೆ ಮಣ್ಣು ಕುಸಿತ, ಕ್ಲಾಸ್ ರೂಂಗಳಿಗೆ ಹಾನಿ :ಶಾಲೆಗೆ ರಜೆ ಇದ್ದರಿಂದ ತಪ್ಪಿದ ಭಾರೀ ಅನಾಹುತ
ಕೊಡಗು: ಕೊಯನಾಡು ಸರ್ಕಾರಿ ಶಾಲೆ ಮೇಲೆ ಮತ್ತೆ ಮಣ್ಣು ಕುಸಿತವಾಗಿದೆ.ಭಾರಿ ಮಳೆಗೆ ಶಾಲಾ ಕಟ್ಟಡದ ಮೇಲೆ ಮಣ್ಣು ಕುಸಿದಿದ್ದು ಭಾರಿ ಹಾನಿ ಸಂಭವಿಸಿದೆ. ಕ್ಲಾಸ್ ರೂಂಗಳು ಹಾನಿಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಳೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ಘೋಷಣೆ ಮಾಡಿದೆ. ಈ ಹಿಂದೆ ಹಲವು ಸಲ ಇದೇ ಶಾಲೆಯ ಮೇಲೆ ಮಣ್ಣು ಕುಸಿದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಶಾಲೆಯಲ್ಲಿ ಕಲಿಯುವ ಮಕ್ಕಳ ರಕ್ಷಣೆ ಬಗ್ಗೆ ಸರ್ಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಿದೆ.




