ಕೊಡಗಿನಲ್ಲಿ ಭಾವೈಕ್ಯದ ಈದ್ ಸಂಭ್ರಮಾಚರಣೆ

ಹಬ್ಬಗಳು ಭಾವೈಕ್ಯ ದ ಸಂದೇಶವನ್ನು ಸಾರುತ್ತದೆ, ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ನಮ್ಮ ಭಾರತ ಎಂದಿಗೂ ಶಾಂತಿ ನೆಮ್ಮದಿಯನ್ನು ಬಯಸುತ್ತದೆ ಹೊರತು ದ್ವೇಷದ ವಾತಾವರಣವಲ್ಲ.ಪ್ರವಾದಿ ( ಸ) ರವರು ನೀವು ಎಲ್ಲಿಯವರೆಗೆ ನಿಮ್ಮ ನೆರೆಯವರನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಓರ್ವ. ಉತ್ತಮ ವಿಶ್ವಾಸಿ ಯಾಗಲು ಸಾದ್ಯವಿಲ್ಲ. ನಾಡಿನ ಸರ್ವ ಜನರಿಗೆ ಈ ಸಂಧರ್ಭದಲ್ಲಿ ಹಬ್ಬದ ಶುಭಾಶಯ ಸಲ್ಲಿಸಿತ್ತೇನೆ ಎಂದು ಹಾಫಿಝ್ ಫಝಲುಲ್ ರೆಹಮಾನ್ ಹಾರೈಸಿದರು.

ಅವರು ಮಡಿಕೇರಿಯ ಬದ್ರಿಯಾ ಮಸೀದಿಯಲ್ಲಿ ಈದ್ ನಮಾಝ್ ನೇತೃತ್ವ ವಹಿಸಿದ ನಂತರ ನೆರೆದವರನ್ನುದ್ದೇಶಿಸಿ ಮಾತನಾಡಿದರು.. ಇದೇ ಸಂಧರ್ಭದಲ್ಲಿ ನಾಡಿನಲ್ಲಿ ಉತ್ತಮ ಮಳೆ ಬೆಳೆ ಹಾಗೂ ಸಮೃದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು,

ವಿವಿಧ ಮಸೀದಿಗಳಲ್ಲಿ ಈದ್ ನಮಾಝ್

ನಗರದ ಸಿ.ಪಿ.ಸಿ ಲೇ ಔಟ್ ನ ಮಸ್ಜಿದ್ ಉರ್ ರಹ್ಮಾ ಮಸೀದಿಯಲ್ಲಿ ಜ] ಉಮರ್ ಮೌಲವಿ ಭಟ್ಕಲ್ ಮಸೀದಿಯಲ್ಲಿ ಜ] ಅಲೀ ಮುಸ್ಲಿಯಾರ್, ಮಲಬಾರ್ ಜುಮಾಅತ್ ಮಸೀದಿಯಲ್ಲಿ ಅಬ್ದುಲ್ ಹಮೀದ್ ಮದನಿ, ಹಾಗೂ ಸಲಫಿ ಮಸೀದಿಯಲ್ಲಿ ಸಲಾವುದ್ದೀನ್ ಚುಝೈಲಿ ರವರ ನೇತೃತ್ವದಲ್ಲಿ ನಡೆಯಿತು..

Latest Indian news

Popular Stories