ವಿಕಲಚೇತನರಿಗೂ ಪರಿಹಾರ ನೀಡಲು ಕೊಡಗು ಜೆಡಿಎಸ್ ಒತ್ತಾಯ

ಮಡಿಕೇರಿ ಜೂ.೪ : ರಾಜ್ಯ ಸರ್ಕಾರ ಕೋವಿಡ್ ಲಾಕ್ ಡೌನ್ ಹಿನ್ನೆಲೆ ವಿವಿಧ ಕ್ಷೇತ್ರಗಳ ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ. ಆದರೆ ವಿಕಲಚೇತನರನ್ನು ಕಡೆಗಣ ಸಿರುವುದು ಸರಿಯಾದ ಕ್ರಮವಲ್ಲವೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸ್ವಯಂ ಉದ್ಯೋಗ, ಖಾಸಗಿ ಸಂಸ್ಥೆ ಸೇರಿದಂತೆ ವಿವಿಧೆಡೆ ಸ್ವಾವಲಂಬಿಗಳಾಗಿ ದುಡಿಯುತ್ತಿರುವ ಲಕ್ಷಾಂತರ ವಿಕಲಚೇತನರಿದ್ದಾರೆ. ಆದರೆ ಕಳೆದ ಎರಡು ತಿಂಗಳುಗಳಿAದ ಈ ವರ್ಗಕ್ಕೆ ಆದಾಯವೇ ಇಲ್ಲದಾಗಿದ್ದು, ಕೊಡಗಿನಲ್ಲೂ ಸಾವಿರಾರು ಮಂದಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ಯಾಕೇಜ್ ಘೋಷಣೆಯ ಮೂಲಕ ಎಲ್ಲರನ್ನೂ ಸಮಾಧಾನಪಡಿಸುವ ಯತ್ನ ಮಾಡಿರುವ ಸರ್ಕಾರ ಅಸಹಾಯಕರಾಗಿರುವ ವಿಕಲಚೇತನರ ಬಗ್ಗೆ ಮಲತಾಯಿ ಧೋರಣೆ ತೋರಿದೆ. ಅಲ್ಲದೆ ಮಾಸಾಶನವೂ ಸಕಾಲದಲ್ಲಿ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ತಕ್ಷಣ ವಿಕಲಚೇತನರಿಗೂ ಸೂಕ್ತ ಪರಿಹಾರ ಧನ ಘೋಷಿಸಬೇಕು, ತಪ್ಪಿದಲ್ಲಿ ವಿಕಲಚೇತನರ ಹೋರಾಟದೊಂದಿಗೆ ಜೆಡಿಎಸ್ ಕೂಡ ಕೈಜೋಡಿಸಲಿದೆ ಎಂದು ಗಣೇಶ್ ಎಚ್ಚರಿಕೆ ನೀಡಿದ್ದಾರೆ. ಫೋಟೋ :: ಗಣೇಶ್

Latest Indian news

Popular Stories