ಕೊಡಗು: ವ್ಯಕ್ತಿಯ ಅಪಹರಣ : ಮಹಿಳೆ ಸೇರಿ ಆರೋಪಿಗಳನ್ನು ಬಂಧಿಸಿದ ಪೊಲೀಸರು

ವ್ಯಕ್ತಿಯೊಬ್ಬರನ್ನು ಬಲವಂತವಾಗಿ ವಾಹನದಲ್ಲಿ ಅಪಹರಿಸಿ ಚಿನ್ನಾಭರಣ, ನಗದು ಹಣ, ಮೊಬೈಲ್ ಸೇರಿದಂತೆ ಸ್ಕೂಟಿ ವಾಹನ ಮತ್ತು ಎ.ಟಿ.ಎಂ. ಕಾರ್ಡ್ ಗಳನ್ನು ದೋಚಿದ್ದ ಗ್ಯಾಂಗ್ ನ ಮಹಿಳೆ ಸೇರಿದಂತೆ ಒಟ್ಟು 9ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರು ರಾಜೀವ್ ನಗರದ ಯಾಸಿನ್ (21), ರುಕ್ಷಾನ ಗಂಡ: ಯಾಸಿನ್ (23), ಪೌತಿ ಆಕ್ರಂ (24), ಮೈಸೂರು ಗೌಸಿಯ ನಗರದ ಸಹಭಾಜ್ ತಂದೆ : ಆಕ್ರಂ (28), ಅಬ್ಸಲ್ ತಂದೆ : ಖಲೀಲ್ ಪಾಷ (21), ಸುಹೇಲ್ ಅಹಮದ್ ತಂದೆ: ಮಮ್ಮದ್ ಗೌಸ್ (30), ಫೈಜಲ್ ಖಾನ್ ತಂದೆ: ನಸರುಲ್ಲ ಖಾನ್ (23), ಪಿರಿಯಾಪಟ್ಟಣದ ಯಾಸಿನ್ ತಂದೆ : ಸಮೀರ್ ಖಾನ್ (23) ಇವರುಗಳೇ ಬಂಧಿತ ಆರೋಪಿಗಳಾಗಿದ್ದು, ಪಿಳ್ಳೆ ಅಲಿಯಾಸ್ ಖುರಾನ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳು ತಾ. 4ರಂದು ರಾತ್ರಿ 7.30 ಗಂಟೆಗೆ ಕುಶಾಲನಗರ ಕೆ.ಎಸ್. ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಕಣಿವೆ ಬಸವನಹಳ್ಳಿ ಗ್ರಾಮದ ಹೇಮಂತ್ ಎಂಬವರನ್ನು ಬಲವಂತ ವಾಗಿ ಸ್ಕಾರ್ಪಿಯೋ ವಾಹನದಲ್ಲಿ ಅಪಹರಿಸಿದ್ದರು. ಬೆಟ್ಟದಪುರ ರಸ್ತೆಗೆ ಹೋದ ಅಪಹರಣಕಾರರು ಹೇಮಂತ್ ರವರ ಕೈಯಲ್ಲಿದ್ದ ಒಟ್ಟು 14 ಗ್ರಾಂ ತೂಕದ 6 ಚಿನ್ನದ ಉಂಗುರಗಳು, 7 ಗ್ರಾಂ ತೂಕದ ಒಂದು ಬ್ರಾಸ್ ಲೇಟ್, 12 ಗ್ರಾಂ ತೂಕದ ಒಂದು ಚಿನ್ನದ ಚೈನ್ ಹಾಗೂ ಲಾಕೆಟ್ , ಎರಡು ಎ.ಟಿ.ಎಂ. ಕಾರ್ಡ್ ಗಳು, ಎರಡು ಮೊಬೈಲ್, ಒಂದು ಸ್ಮಾರ್ಟ್ ವಾಚ್, ಪರ್ಸ್, ಸ್ಕೂಟಿ ಸಮೇತ ರೂ 4 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದರು.ಕೃತ್ಯದ ಕುರಿತು ಹೇಮಂತ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.


ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ವಾಹನ, 30 ಗ್ರಾಂ ತೂಕದ ಒಟ್ಟು ರೂ. 1,82,000 ಮೌಲ್ಯದ ಚಿನ್ನಾಭಾರಣ, ರೂ. 50 ಸಾವಿರ ಮೌಲ್ಯದ ಎರಡು ಮೊಬೈಲ್ ಗಳು, ಹೇಮಂತ್ ರವರಿಗೆ ಸೇರಿದ ಸ್ಕೂಟಿ, ಆರೋಪಿತೆ ರುಕ್ಷಾನ ಕೃತ್ಯಕ್ಕೆ ಬಳಸಿದ ಸ್ಕೂಟಿ, ರೂ ಐದು ಸಾವಿರ ನಗದು ಹಣ ಆರೋಪಿಗಳಿಗೆ ಸೇರಿದ ಒಟ್ಟು 7 ಮೊಬೈಲ್ ಗಳು ಸೇರಿದಂತೆ ಒಟ್ಟು 5,97,000 ಮೌಲ್ಯದ ವಸ್ತುಗಳನ್ನು ವಶ ಪಡಿಸಿ ಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ ರಾಮರಾಜನ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರ್ ರಾಜ್, ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧಿಕ್ಷಕರಾದ ಆರ್. ವಿ. ಗಂಗಾಧರಪ್ಪ ಇವರುಗಳ ಮಾರ್ಗದರ್ಶನದಲ್ಲಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಿ. ಜಿ. ಪ್ರಕಾಶ್ ನೇತೃತ್ವದಲ್ಲಿ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ಪರಿಶ್ರಮದಲ್ಲಿ ಪ್ರಕರಣವನ್ನು ಬೇಧಿಸಿದ್ದಾರೆ. ಇವರೆಲ್ಲರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಅವರು ಪ್ರಶಂಸಿದಾರೆ

Latest Indian news

Popular Stories