
Kodagu
ಕಾಡಿನಿಂದ ನಾಡಿಗೆ ಬಂದ ಕಾಡಾನೆ ದಂಡು
ಕೊಡಗಿನ ಕಿಗ್ಗಾಲುವಿನಲ್ಲಿ ಇಂದು ಈ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದು ಸುಮಾರು ಅರವತ್ತು ಕಾಪಿ ಗಿಡಗಳನ್ನು ನಾಶ ಪಡಿಸಿದೆ ಎಂದು ತಿಳಿದು ಬಂದಿದೆ.
ಬಾಡಗದಿಂದ ಕಿಗ್ಗಾಲಿಗೆ ಬಂದಿರುವ ನಾಲ್ಕು ಗಂಡಾನೆಗಳು ಮನೆಗಳ ಆಸು ಪಾಸುವಿರುವ ತೋಟಗಳಿಗೆ
ಗಳಿಗೆ ನುಗ್ಗಿರುವ ಬಗ್ಗೆ ಊರಿನವರು ಭಯದಿಂದಲೇ ವೀಡಿಯೋ ಚಿತ್ರೀಕರಿಸಿರುವುದು ಕಂಡು ಬಂದಿದೆ.
ಸ್ಥಳೀಯರು ಆನೆಗಳನ್ನು ಓಡಿಸಲು ಯಶಸ್ವಿಯಾಗಿದ್ದು ಆನೆಗಳು ಮೂರ್ನಾಡು ಕಡೆಗೆ ತೆರಳಿರುವ ಬಗ್ಗೆ ಶಂಕಿಸಲಾಗಿದೆ.




