ಕುಂಬಳೆ ಪೇಟೆಯಲ್ಲಿ 14 ವಯಸ್ಸಿನ, 9ನೇ ತರಗತಿಯ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ ಗುದ್ದಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೃತರಾಗಿದ್ದಾರೆ.
ಅಂಗಡಿಮೊಗರು ಪೆರ್ಲಾಡ ನಿವಾಸಿ ಮೈಕ್ ಆಪರೇಟರ್ ಅಬ್ದುಲ್ಲ ಕುಂಞಿ (60) ಮೃತರು.
ಕುಂಬಳೆ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಪೇಟೆಗೆ ತೆರಳುತ್ತಿದ್ದ ಅಬ್ದುಲ್ಲ ಕುಂಞಿ (60) ಅವರಿಗೆ ಬಾಲಕ ವೇಗವಾಗಿ ಒಡಿಸುತ್ತಿದ್ದ ಬೈಕ್ ಗುದ್ದಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ. ಸಾವಿಗೀಡಾದರು.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂಗೆ ಒಯ್ಯಲಾಗಿದೆ.
ಬೈಕಿನಲ್ಲಿ ಈರ್ವರು ಆಪ್ರಾಪ್ತ ವಯಸ್ಕ ವಿದ್ಯಾರ್ಥಿಗಳಿದ್ದು ಬೈಕ್ ಚಾಲಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. .