ನನ್ನ ಸೋಲಿಗೆ ನಾನೇ ಕಾರಣ – ಎಂ ಲಕ್ಷ್ಮಣ

ನಾನು ಮತದಾರ ಪ್ರಭುಗಳನ್ನು ಸ್ಯಾಡಿಸ್ಟ್ ಎಂದು ಹೇಳಿಲ್ಲ. ಇಡೀ ವ್ಯವಸ್ಥೆ ಸ್ಯಾಡಿಸ್ಟ್ ಆಗಿದೆ ಎಂದು ಹೇಳಿದ್ದೇನೆ ಎಂದು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್ ಸ್ಪಷ್ಟನೆ ನೀಡಿದರು.

ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿರುವ ನ್ಯೂನತೆಯನ್ನು ಸರಿಪಡಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ಮನವಿ ಮಾಡಿಕೊಳ್ಳಲಾಗಿದೆ.

ನನ್ನ ಸೋಲಿಗೆ ನಾನೇ ಕಾರಣ, ನನಗೆ ಮತ ನೀಡಿದವರಿಗೂ ನೀಡದೇ ಇರುವವರಿಗೂ ಎಲ್ಲರಿಗೂ ಧನ್ಯವಾದ‌. ವಾರಕ್ಕೆ ಒಂದು ಮಡಿಕೇರಿ ಕಾಂಗ್ರೆಸ್ ಕಚೇರಿಯಲ್ಲಿ ಹಾಗೂ ಒಂದು ದಿನ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಕೆ ಮಾಡುತ್ತೇನೆ ಎಂದರು.

ಕೇಂದ್ರದ ಸಚಿವ ಸಂಪುಟದಲ್ಲಿ 72 ಸಚಿವರ ಪೈಕಿ ಒಂದೇ ಸಮುದಾಯಕ್ಕೆ ಸೇರಿದ 25 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಹಿಂದುಳಿದ ಸಮುದಾಯಕ್ಕೆ ಯಾವುದೇ ಸಚಿವ ಸ್ಥಾನ ನೀಡಿಲ್ಲ.ಕೇಂದ್ರ ಸರಕಾರದಲ್ಲಿ ಸಚಿವರಾಗಿರುವ ಹೆಚ್.ಡಿ.ಕುಮಾರ ಸ್ವಾಮಿ ಅವರು, ಕಸ್ತೂರಿ ರಂಗನ್ ವರದಿ, ಕಾವೇರಿ, ಮೇಕೆದಾಟು, ಕಳಸಬಂಡೂರಿ, ಮಹದಾಯಿ,ಅಲಮಟ್ಟಿ ಸೇರಿದಂತೆ ರಾಜ್ಯದ ನೀರಾವರಿ ಸಮಸ್ಯೆ ಪರಿಹರಿಸಲಿ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬರಪರಿಹಾರ, ರೈತರ ಸಾಲಮನ್ನಾ, ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲುಹಣ ಕೇಂದ್ರದಿAದ ಕೊಡಿಸಿಕೊಡುವಂತೆ ಹಾಗೂ ಕೊಡಗಿಗೆ ಬೃಹತ್ ಕೈಗಾರಿಗೆ ತರುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಎಂ.ಲಕ್ಷ್ಮಣ್ ಒತ್ತಾಯಿಸಿದರು.

ಜೆಡಿಎಸ್ ಕೇಂದ್ರ ಸರಕಾರದ ಪಾಲುದಾರ ಪಕ್ಷವಾಗಿರುವುದರಿಂದ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ. ಇಲ್ಲದಿದ್ದಲ್ಲಿ ನಾನು ಪ್ರಶ್ನಿಸುವುದಾಗಿ ಎಂ.ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಕೊಟ್ಟಮುಡಿ ಹಂಸ, ಟಾಟು ಮೊಣ್ಣಪ್ಪ, ವಿಶು ರಂಜಿ, ಮುಕ್ಕಾಟಿರ ಸಂದೀಪ್ ಉಪಸ್ಥಿತರಿದ್ದರು.

Latest Indian news

Popular Stories