Kodagu

ವೈದ್ಯಕೀಯ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು : ಎಂಎಲ್‌ಸಿ ವೀಣಾಅಚ್ಚಯ್ಯ ಸಲಹೆ

ಮಡಿಕೇರಿ ಮೇ ೧೨ : ಕೊಡಗು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಆದರೆ ಈ ಪ್ರಕ್ರಿಯೆ ಮತ್ತಷ್ಟು ಪರಿಣಾಮಕಾರಿಯಾಗಬೇಕಾದರೆ ವೈದ್ಯಕೀಯ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯAಡ ವೀಣಾಅಚ್ಚಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಗಮನ ಸೆಳೆದಿರುವ ಅವರು ಕೋವಿಡ್ ಆಸ್ಪತ್ರೆಗೆ ಸಂಬAಧಿಸಿದAತೆ ಹಲವು ಸಲಹೆಗಳನ್ನು ನೀಡಿದ್ದಾರೆ.
ಕೋವಿಡ್ ಸೋಂಕಿತರು ಅನಾರೋಗ್ಯದಿಂದ ಬಳಲುವುದಕ್ಕಿಂತ ಹೆಚ್ಚು ಮಾನಸಿಕವಾಗಿ ಕುಂದಿ ಹೋಗುತ್ತಿರುವುದು ಕಂಡು ಬಂದಿದೆ. ಆತಂಕಕ್ಕೆ ಒಳಗಾಗುತ್ತಿರುವ ಸೋಂಕಿತರ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಸುಳಿದಾಡಿ ಚೇತರಿಸಿಕೊಳ್ಳುವ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಸೋಂಕಿತರಿಗೆ ಔಷಧಿ ಮತ್ತು ಊಟದೊಂದಿಗೆ ತಜ್ಞರ ಮೂಲಕ ಕೌನ್ಸಿಲಿಂಗ್ ಕೂಡ ಮಾಡಬೇಕಾಗಿದೆ. ಮಾನಸಿಕ ಧೈರ್ಯ ತುಂಬುವ ಮೂಲಕ ಶೀಘ್ರ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಮತ್ತು ಆಸ್ಪತ್ರೆಯಲ್ಲೂ ಮನೆಯ ವಾತಾರಣವನ್ನು ಸೃಷ್ಟಿಸಬೇಕು.
ಪ್ರತಿದಿನ ಇಡೀ ಆಸ್ಪತ್ರೆ ಮತ್ತು ಕೋವಿಡ್ ಸೆಂಟರ್ ಗಳನ್ನು ಸ್ಯಾನಿಟೈಸ್ ಮಾಡಬೇಕು. ಅಲ್ಲದೆ ಕೋವಿಡ್ ಕೇಂದ್ರಗಳಿರುವ ಊರಿನ ಮುಖ್ಯ ಬಡಾವಣೆ ಮತ್ತು ರಸ್ತೆಗಳಲ್ಲೂ ಸ್ಯಾನಿಟೈಸ್ ಸಿಂಪಡಿಸಬೇಕು.
ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತಿದಿನ ಸೃಷ್ಟಿಯಾಗುವ ವೈದ್ಯಕೀಯ ಪ್ರಕ್ರಿಯೆಗೆ ಸಂಬAಧಿಸಿದ ತ್ಯಾಜ್ಯಗಳನ್ನು ವೈಜ್ಞಾನಿಕ ರೂಪದಲ್ಲಿ ವಿಲೇವಾರಿ ಮಾಡಲು ಹೈಟೆಕ್ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ಅತ್ಯಂತ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು.
ಕೋವಿಡ್ ಆಸ್ಪತ್ರೆಯಲ್ಲಿ “ಡಿ” ಗ್ರೂಪ್ ನೌಕರರ ಕೊರತೆ ಎದ್ದು ಕಾಣುತ್ತಿದ್ದು, ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಸಾಧ್ಯವಾಗದೇ ಇರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ತುರ್ತಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರನ್ನು ನಿಯೋಜಿಸಬೇಕು.
ಐಸಿಯು ವಾರ್ಡ್ಗೆ ಅಗತ್ಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕಾಗಿದೆ. ಈ ಕ್ರಮದಿಂದ ಕೋವಿಡ್ ಸೋಂಕಿತರ ಸ್ಥಿತಿಗತಿಯನ್ನು ತಕ್ಷಣ ತಿಳಿದು ವೈದ್ಯರು ಹಾಗೂ ಶ್ರುಷೂಕಿಯರು ಸಕಾಲದಲ್ಲಿ ಸ್ಪಂದಿಸಬಹುದಾಗಿದೆ. ಅಲ್ಲದೆ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಖಾತ್ರಿಯಾಗುತ್ತದೆ ಮತ್ತು ಸೋಂಕಿತರ ಸಂಬAಧಿಗಳಿಗೂ ತಮ್ಮವರ ಕುರಿತು ಮಾಹಿತಿ ದೊರೆಯುತ್ತದೆ. ಸೋಂಕಿತರು ತಮ್ಮ ಕಷ್ಟ, ಸುಖಗಳನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಬೇಕು. ಇದರಿಂದ ರೋಗಿಗಳ ಮಾನಸಿಕ ಸ್ಥೆöÊರ್ಯ ಹೆಚ್ಚಾಗಿ ಆರೋಗ್ಯ ಸ್ಥಿತಿ ಸುಧಾರಿಸಲು ಸಹಕಾರಿಯಾಗುತ್ತದೆ.
ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಔಷಧಿ ಮತ್ತು ಊಟವನ್ನು ಸಕಾಲದಲ್ಲಿ ಸಮರ್ಪಕವಾಗಿ ನೀಡಲು ನಾಲ್ವರು ಪ್ರತ್ಯೇಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು.
ಶ್ರುಷೂಕಿಯರು ಪ್ರತಿ ರೋಗಿಯ ಆರೋಗ್ಯದಲ್ಲಿನ ಏರುಪೇರುಗಳ ಬಗ್ಗೆ ಮೇಲಿನ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿರುವ ವೀಣಾಅಚ್ಚಯ್ಯ ಅವರು, ಭವಿಷ್ಯದಲ್ಲಿ ಈ ಮಾಹಿತಿ ದಾಖಲೆಯಾಗಿ ಉಳಿದುಕೊಂಡು ವೈದ್ಯಕೀಯ ವ್ಯವಸ್ಥೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಫೋಟೋ :: ವೀಣಾಅಚ್ಚಯ್ಯ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button