
ಕೊಡಗು: SDPI ಜಿಲ್ಲಾ ಅಧ್ಯಕ್ಷರಾಗಿ ಅಮೀನ್ ಮುಹ್ಸಿನ್ ಆಯ್ಕೆ
ದಿನಾಂಕ 8.01.2025 ರಂದು ಕುಶಾಲನಗರ ದ ಕೊಪ್ಪ ಬಳಿ ಇರುವ ಮಹಾರಾಜ ರೆಸಾರ್ಟ್ ನಲ್ಲಿ ಕೊಡಗು ಜಿಲ್ಲಾ ಪ್ರತಿನಿಧಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಪ್ರತಿನಿಧಿ ಸಭೆಗೆ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್,ರಾಜ್ಯ ಕಾರ್ಯದರ್ಶಿಗಳಾದ ಅಕ್ರಮ್ ಮೌಲಾನ, ಅಪ್ಸರ್ ಕೆ ಆರ್ ನಗರ ಹಾಗೂ ರಾಜ್ಯ ಖಜಾಂಜಿ ಅಕ್ರಂ ಆಗಮಿಸಿದ್ದರು. ಸುಮಾರು 11 ಗಂಟೆಗೆ ಜಿಲ್ಲಾಧ್ಯಕ್ಷರಾದ ಅಬ್ದುಲ್ಲಾ ಅಡ್ಕಾರ್ ಧ್ವಜಾರೋಹಣ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಪ್ರಾಸ್ತಾವಿಕ ನುಡಿಗಳನ್ನು ಆಡಿ ಪಕ್ಷವನ್ನು ಬಲಪಡಿಸುವ ವಿಚಾರದಲ್ಲಿ ಸಲಹೆಗಳನ್ನು ನೀಡಿದರು. ನಂತರ ಪ್ರಸಕ್ತ ರಾಜಕೀಯ ವಿಧ್ಯಮಾನಗಳ ಬಗ್ಗೆ ಚರ್ಚಿಸಲಾಯಿತು.ನಿರ್ಗಮಿತ ಪ್ರಧಾನ ಕಾರ್ಯದರ್ಶಿಗಳಾದ ಬಶೀರ್ ಅಹ್ಮದ್ ರವರು ವರದಿಯನ್ನು ಮಂಡಿಸಿದರು. ಹಾಲಿ ಜಿಲ್ಲಾ ಸಮಿತಿಯನ್ನು ವಿಸರ್ಜಿಸಿ ಹೊಸ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಕೊಡಗು ಜಿಲ್ಲಾಧ್ಯಕ್ಷರಾಗಿ ಅಡ್ವಕೇಟ್ ಅಮೀನ್ ಮೂಹಿಸಿನ್ ರವರು ಆಯ್ಕೆಯಾದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಉಸ್ಮಾನ್ ಸುಂಟಿಕೊಪ್ಪ ರವರು ಕಾರ್ಯದರ್ಶಿಯಾಗಿ ಬಶೀರ್ ಅಹ್ಮದ್ ರವರು ಉಪಾಧ್ಯಕ್ಷರಾಗಿ ಮನ್ಸೂರಲಿ ಮಡಿಕೇರಿ ಹಾಗೂ ನಫೀಸಾ ಅಕ್ಬರ್ ರವರು ಆಯ್ಕೆಯಾದರು ಕೋಶಾಧಿಕಾರಿಯಾಗಿ ಅಕ್ಮಲ್ ಪಾಷಾ ರವರು ಹಾಗೂ ಸಮಿತಿ ಸದಸ್ಯರುಗಳಾಗಿ ಸ್ವಾಲಿಹ್ ಸೋಮವಾರಪೇಟೆ,ಬಶೀರ್ ಕೆ ಸಿ,ಮೆರಿ ವೆಗಸ್, ಅಬ್ದುಲ್ಲ ಅಡ ಕಾರ್ ರವರು ಆಯ್ಕೆಯಾದರು.
ಸಭೆಯಲ್ಲಿ ಸರ್ವಾನುಮತದಿಂದ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು
1) ಕೊಡಗಿನಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ಆನೆ ಮಾನವ ಸಂಘರ್ಷದಲ್ಲಿ ಹಲವಾರು ಕಾರ್ಮಿಕರು ಹಾಗೂ ಬೆಳೆಗಾರರು ಜೀವ ಕಳೆದುಕೊಂಡಿದ್ದಾರೆ.ಅರಣ್ಯ ಇಲಾಖೆಯವರು ಸಣ್ಣ ಪರಿಹಾರದ ಮೊತ್ತ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಇದು ಇನ್ನಷ್ಟು ಜೀವಗಳು ಬಲಿಯಾಗುವ ಸಾಧ್ಯತೆ ಇದೆ. ಇಲಾಖೆ ಹಾಗೂ ಸರ್ಕಾರ ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಮಾತ್ರವಲ್ಲ ಜಿಲ್ಲೆಯ ಶಾಸಕರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆಯಬೇಕು.
2) ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗಲು ಜಿಲ್ಲೆಯಲ್ಲಿ ಹರಿಯುವ ನದಿಗಳಲ್ಲಿ ಹೂಳು ತುಂಬಿದ ಕಾರಣವಾಗಿರುತ್ತದೆ. ಎಲ್ಲಾ ನದಿಗಳಲ್ಲಿನ ಹೂಳುಗಳನ್ನು ತೆರೆವುಗೊಳಿಸಿ ಮಳೆ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಎಸ್ ಡಿ ಪಿ ಐ ಕೊಡಗು ಜಿಲ್ಲಾ ಪ್ರತಿನಿಧಿ ಸಭೆಯು ಆಗ್ರಹಿಸುತ್ತದೆ.
3. ಕೊಡಗಿನ ನಗರ ಪ್ರದೇಶ ಹಾಗೂ ಗ್ರಾಮಗಳಲ್ಲಿ ಸಾವಿರಾರು ವಸತಿ ರಹಿತ ಬಡ ಕುಟುಂಬಗಳು ಜೀವನ ಮಾಡುತ್ತಿದ್ದು ಎಲ್ಲಾ ವಸತಿ ರಹಿತರಿಗೂ ಹಾಗೂ ನಿವೇಶನ ರಹಿತರಿಗೂ ಭೂಮಿ ಮತ್ತು ವಸತಿ ಹಕ್ಕುಗಳನ್ನು ನೀಡಬೇಕು.
4. ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆಯಿಂದ ವಶಪಡಿಸಿ ಕೂಡಲೇ ಭೂ ರಹಿತರಿಗೆ ಹಂಚಬೇಕೆಂದು.
5. ಕೊಡಗಿನ ಎಲ್ಲಾ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸುತ್ತದೆ…




