KodaguFeatured Story

ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಸ್ ಎಡಿ ಪಿ ಐ ಜಿಲ್ಲಾಧ್ಯಕ್ಷ ಅಮೀನ್ ಮುಹ್ಸಿನ್

ಮಡಿಕೇರಿಯಲ್ಲಿ ಎಸ್ ಡಿ ಪಿ ಐ ರಾಷ್ಟ್ರಧ್ಯಕ್ಷರ ಬಂಧನ ಖಂಡಿಸಿ ಪ್ರತಿಭಟನೆ

Sdpi ಪಕ್ಷದ ರಾಷ್ಟೀಯ ಅಧ್ಯಕ್ಷರಾದ ಎಂ ಕೆ ಫೈಜಿ ಬಂಧನ ವನ್ನು ಖಂಡಿಸಿ ನಗರದ ಐ.ಜಿ ವ್ರತ್ತ ದಲ್ಲಿ ಜಮಾಯಿಸಿದ ಕಾರ್ಯಕರ್ತರುಗಳು ಕೇಂದ್ರ ಸರ್ಕಾರ ಮತ್ತು ಸರ್ಕಾರದ ಏಜಂನ್ಸಿ ಗಳ ವಿರುದ್ದ ಘೋಷಣೆಯನ್ನು ಕೂಗಿ ಪ್ರತಿಭಟಿಸಿದರು.

ಪ್ರತಿಭಟನಾ ಕಾರರನ್ನು ದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಮತ್ತು ನಗರಸಭಾ ಸದಸ್ಯ ಅಮೀನ್ ಮೊಹಸಿನ್ ರಾಷ್ಟೀಯ ಅಧ್ಯಕ್ಷರ ಬಂದನವು ಅಕ್ಷಮ್ಯ ಅಪರಾಧ ವಾಗಿದ್ದು ಕೂಡಲೇ ಬಿಡುಗಡೆ ಗೊಳಿಸುವಂತೆ ಆಗ್ರಹಿಸಿ, ವಖ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ್ದ ಹೋರಾಟವು ನರೇಂದ್ರ ಮೋದಿ ನೇತೃತ್ವದ ಸರ್ಕಾರ ವನ್ನು ನಿದ್ದೆಗೆಡಿಸಿದ್ದು, ಹೋರಾಟ ವನ್ನು ಹತ್ತಿಕ್ಕುವ ಮತ್ತು ಹೋರಾಟದಿಂದ ಹಿಂದೆ ಸರಿಸುವ ಭಾಗವಾಗಿ ನಮ್ಮ ರಾಷ್ಟೀಯ ಅಧ್ಯಕ್ಷರನ್ನು ಬಂದಿಸಲಾಗಿದ್ದು ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರಿರುವ ವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲಾ ಮತ್ತು ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸುವುದಾಗಿ ಎಚ್ಚರಿಸಿದರು.ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ ಮಾತನಾಡಿ sdpi ಪಕ್ಷವು ಕಾಡೆರ್ ಬೆಸ್ಡ್ ಪಕ್ಷವಾಗಿದ್ದು ಒಬ್ಬ ಅಧ್ಯಕ್ಷ ರನ್ನು ಬಂಧನ ದಿಂದಿಡುವ ಮೂಲಕ ಚಳುವಳಿ ಯನ್ನು ಹತ್ತಿಕ್ಕಲು ಸಾಧ್ಯ ವಾಗುವುದಿಲ್ಲವೆಂದರು.

ಪ್ರತಿಭಟನೆಯಲ್ಲಿ ಪಕ್ಷದ ಕುಶಾಲನಗರ ಘಟಕಧ್ಯಕ್ಷ ಝಕ್ರಿಯ, ಮಡಿಕೇರಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಭಾಷಾ, ವಿರಾಜಪೇಟೆ ಕ್ಷೇತ್ರಾ ಉಪಾಧ್ಯಕ್ಷರು ಯೂಸುಫ್ , ಮಡಿಕೇರಿ ನಾಗರಾಧ್ಯಕ್ಷ ರಿಜ್ವಾನ್, ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಜಿಲ್ಲಾ ಉಪಾಧ್ಯಕ್ಷ ಮನ್ಸೂರ್ ಅಲಿ, ನಫೀಸ ಅಕ್ಬರ್, ವಿಮೆನ್ ಇಂಡಿಯಾ ಮೂಮೆಂಟ್ ಅಧ್ಯಕ್ಷೆ ಸಲಿಕತ್ ಹಾಗೂ ರಿಶಾನ ಸೇರಿದಂತೆ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.ನಗರಸಭಾ ಸದಸ್ಯ ಬಷೀರ್ ಸ್ವಾಗತಿಸಿ ವಂದಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button