ಕೊಡಗಿನ ಮಾಜಿ ಶಾಸಕದ್ವಯರು ಸರ್ಕಾರವನ್ನು ಟೀಕಿಸುವ ನೈತಿಕತೆ ಹೊಂದಿಲ್ಲ : ತೆನ್ನಿರ ಮೈನಾ


ಕೊಡಗಿನ ಮಾಜಿ ಶಾಸಕದ್ವಯರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ನವರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯಲ್ಲಿ ಸುಧೀರ್ಘ ಅವಧಿ ಶಾಸಕರಾಗಿ ಅಧಿಕಾರ ನಡೆಸಿದ ಮಾಜಿಗಳು ಕೊಡಗಿನ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಮೂಲಕ ಜನತೆಗೆ ದ್ರೋಹ ಬಗೆದು ಈಗಿನ ಸರ್ಕಾರವನ್ನು ಟೀಕಿಸಲು ಹೊರಟಿರುವುದು ಹಾಸ್ಯಾಸ್ಪದ ವಾಗಿದೆ ಎಂದು ಕುಟುಕಿದ್ದಾರೆ.

ಭ್ರಷ್ಟ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ಕೊಡಗನ್ನು ಅಭಿವೃದ್ಧಿ ಶೂನ್ಯ ಜಿಲ್ಲೆಯನ್ನಾಗಿ ಮಾಡಿದ್ದಲ್ಲದೇ ಹಲವಾರು ಯೋಜನೆಗಳು ಪೂರ್ಣಗೊಳ್ಳದೆ ಇರಲು ಇವರ ಬೇಜವಬ್ದಾರಿ ತನವೇ ಕಾರಣವಾಗಿದೆ.ಮಡಿಕೇರಿ ತಾಲ್ಲೂಕು ಆಡಳಿತ ಸೌಧ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುವರ್ಣ ಭವನ,ಕೊಡವ ಹೆರಿಟೇಜ್ ನಿರ್ಮಾಣ,ಗ್ರೇಟರ್ ರಾಜಾಸೀಟ್ ಯೋಜನೆ ಸೇರಿದಂತೆ ಅನೇಕ ಕಾಮಗಾರಿಗಳು ಏಳೆಂಟು ವರ್ಷವಾದರೂ ಇನ್ನೂ ಲೋಕಾರ್ಪಣೆ ಆಗದೆ ಇರುವುದು,ಅನೇಕ ರಸ್ತೆ ಕಾಮಗಾರಿ ನಡೆಯದೇ ಇದ್ದರೂ ಬಿಲ್ ಪಾವತಿಯಾಗಿರುವುದು.
ಜೆ.ಜೆ.ಎಂ.ಕಾಮಗಾರಿಯಲ್ಲಿ ಬ್ರಹ್ಮಾಂ ಭ್ರಷ್ಟಾಚಾರ, ತಲಕಾವೇರಿ ಅಭಿವೃದ್ಧಿ ಕಾಮಗಾರಿಯಲ್ಲಿ ಕೋಟ್ಯಾಂತರ ರೂ ದುರುಪಯೋಗ,ಕೊಡಗು ಜಿಲ್ಲಾಧಿಕಾರಿಗಳ ಕಛೇರಿಯ ತಡೆಗೋಡೆಯ ಕಳಪೆ ಕಾಮಗಾರಿ ಇವೆಲ್ಲವೂ ಮಾಜಿ ಶಾಸಕರ ಕೊಡುಗೆಗಳಾಗಿದ್ದು ಇವುಗಳಿಗೆ ಪರೋಕ್ಷ ಪ್ರೋತ್ಸಾಹ ನೀಡಿರುವ ಮಾಜಿಗಳು ಈಗ ತಾವು ಸತ್ಯ ಸಂತರು ಎಂದು ಫೋಸ್ ಕೊಡುತ್ತಿರುವುದು ಎಷ್ಟು ಸರಿ ಎಂದು ತೆನ್ನಿರ ಮೈನಾ ಪ್ರಶ್ನಿಸಿದ್ದಾರೆ.

ನೂತನ ಶಾಸಕರು ಅಧಿಕಾರಿಕ್ಕೆ ಬಂದ ನಂತರ ಮೂವತ್ತು ಸಾವಿರಕ್ಕೂ ಅಧಿಕ ಅರ್ಜಿಗಳು ಸಾರ್ವಜನಿಕರಿಂದ ಬಂದಿದ್ದು ಮಾಜಿ ಶಾಸಕರ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ.
ಸುಂಕದವನ ಮುಂದೆ ಸುಖ,ದುಖ ಹಂಚಿಕೊಂಡರೆ ಪ್ರಯೋಜನವಿಲ್ಲಾ ಎಂಬ ಅರಿವಿದ್ದ ಜನತೆ ಆಗಿನ ಶಾಸಕರ ಬಳಿ ಯಾವ ಸಮಸ್ಯೆಯನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ.ಈಗ ಜನಪರ ಕಾಳಜಿ
ಹೊಂದಿರುವ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರ ಬಳಿ ಜನ ವಿಶ್ವಾಸದಿಂದ ಬಂದು ತಮ್ಮ ಸಮಸ್ಯೆಯನ್ನು ವಿವರಿಸುತ್ತಿದ್ದಾರೆ.ಜನತೆಯ ಎಲ್ಲಾ ಸಮಸ್ಯೆಗಳನ್ನು ಹಂತ,ಹಂತವಾಗಿ ಪರಿಹರಿಸಲು ನೂತನ ಶಾಸಕರು ಬದ್ದರಾಗಿದ್ದಾರೆ ಎಂದು ತೆನ್ನಿರ ಮೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest Indian news

Popular Stories