ಶೂನ್ಯ ಸಾಧನೆಯ ಸಂಸದ ಪ್ರತಾಪ್ ಸಿಂಹ ಕೊಡಗು ಕಾಂಗ್ರೆಸ್ ಟೀಕೆ

ಕೊಡಗು ಮೈಸೂರು ಸಂಸದರಾದ ಪ್ರತಾಪ್ ಸಿಂಹರವರು ಪಸ್ತುತ ಲೋಕಸಭೆಯಲ್ಲಿ ಶೂನ್ಯ ಸಾಧನೆಯ ಸಂಸದ ಎಂಬ ಕುಖ್ಯಾತಿ ಪಡೆದಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ
ತೆನ್ನಿರ ಮೈನಾ ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ಹತ್ತು ವರ್ಷಗಳ ಕಾಲದಿಂದ ಸಂಸದರಾಗಿರುವ ಪ್ರತಾಪ್ ಸಿಂಹ ರವರ ಕೊಡಗು ಜಿಲ್ಲೆಗೆ ನಗಣ್ಯ ಕೊಡುಗೆ ನೀಡಿದ್ದಾರೆ.ಕೇವಲ ಚುನಾವಣೆ ಸಮಯದಲ್ಲಿ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿರುವ ಪ್ರತಾಪ್ ಸಿಂಹ ರವರು ತಾವು ಸಂಸದರಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಎಷ್ಟು ಫಲಾನುಭವಿಗಳಿಗೆ ತಲುಪಿಸಿದ್ದಾರೆ ಎಂಬ ಮಾಹಿತಿ ಜಿಲ್ಲೆಯ ಜನತೆಗೆ ನೀಡಲಿ.

ಕೇಂದ್ರ ಸರ್ಕಾರದ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ,ಪಶುಸಂಗೋಪನೆ ಮಂತ್ರಾಲಯ,ಆಹಾರ ಮತ್ತು ನಾಗರೀಕ ಸರಬರಾಜು ಮಂತ್ರಾಲಯ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ,ಕೇಂದ್ರ ಉನ್ನತ ಶಿಕ್ಷಣ ಮಂತ್ರಾಲಯ,ಗ್ರಾಮೀಣಾಭಿವೃದ್ಧಿ,ಅರಣ್ಯ ಮತ್ತು ಪರಿಸರ,ಯುವಜನ ಸಬಲೀಕರಣ ,ನ್ಯಾಯ ಸಬಲೀಕರಣ ಸೇರಿದಂತೆ ಒಟ್ಟು 49 ನೇರ ಅನುದಾನಗಳ ಯೋಜನೆಗಳಿದ್ದು ಇವುಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಎಷ್ಟು ಜನ ಫಲಾನುಭವಿಗಳಿದ್ದಾರೆ ಎಂದು ಜನತೆಗೆ ತಿಳಿಸಲಿ ಎಂದು ತೆನ್ನಿರ ಮೈನಾ ಒತ್ತಾಯಿಸಿದ್ದಾರೆ.

2023 ರ ಮೇ ನಲ್ಲಿ ನಡೆದ ಕೊಡಗು ಜಿಲ್ಲಾ ದಿಶಾ ಸಭೆಯ ಅಧ್ಯಕ್ಷತೆ ವಹಿಸಿದ ಪ್ರತಾಪ್ ಸಿಂಹರವರು ಮೈಸೂರು ಕೊಡಗು ಚತುಷ್ಪತ ರಸ್ತೆ ಕಾಮಗಾರಿ ಒಂದು ತಿಂಗಳಿನಲ್ಲಿ ಆರಂಭಗೊಳ್ಳಲಿದೆ ಎಂದು ಅಧಿಕೃತವಾಗಿ ಹೇಳಿದ್ದರು.ಆದರೆ ಈಗ ಹತ್ತು ತಿಂಗಳು ಕಳೆದರೂ ರಸ್ತೆ ಕಾಮಗಾರಿ ಯಾಕೆ ಆರಂಭವಾಗಿಲ್ಲ ಎಂದು ಜನತೆಗೆ ತಿಳಿಸಲಿ.

ಈಗಿನ ಶಾಸಕದ್ವಯರ ದಕ್ಷ ಆಡಳಿತದಲ್ಲಿ ಕೊಡಗು ಜಿಲ್ಲೆ ಶಾಂತಿಯ ತೋಟವಾಗಿ ಮಾರ್ಪಾಡು ಆಗಿದ್ದು ಜನತೆ ಅಭಿವೃದ್ಧಿ ಯ ಬಗ್ಗೆ ಮಾತ್ರ ಚರ್ಚಿಸುವ ಪರಿಪಾಠ ರೂಡಿಸಿಕೊಂಡಿದ್ದಾರೆ.ಇಂತಹ ಕೊಡಗಿನಲ್ಲಿ ಅಶಾಂತಿ ವಾತಾವರಣ ಬಿತ್ತಲು ಪ್ರತಾಪ್ ಸಿಂಹ ಪ್ರಯತ್ನಿಸುತ್ತಿದ್ದು ಅವರ ದ್ವೇಷದ ರಾಜಕಾರಣಕ್ಕೆ ಇನ್ನು ಮುಂದೆ ಕೊಡಗಿನ ಜನ ಅವಕಾಶ ನೀಡುವುದಿಲ್ಲ.

ಸಂಸತ್ತಿನಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಭಯೋತ್ಪಾದಕ ರಿಗೆ ಪಾಸ್ ನೀಡಿ ವಿಶ್ವದಲ್ಲೇ ಭಾರತ ತಲೆತಗ್ಗಿಸುವಂತೆ ಮಾಡಿದ ಹಾಗೂ ಕ್ಷೇತ್ರದ ಜನತೆಯನ್ನು ಅಪಮಾನ ಮಾಡಿದ ಪ್ರತಾಪ್ ಸಿಂಹರವರನ್ನು ಎಂದಿಗೂ ಕೊಡಗಿನ ಜನತೆ ಕ್ಷಮಿಸುವುದಿಲ್ಲ ಎಂದು ತೆನ್ನಿರ ಮೈನಾ ಪ್ರತಿಕ್ರಿಯಿಸಿದ್ದಾರೆ.

Latest Indian news

Popular Stories