ಹೊಸದಿಲ್ಲಿ: ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ವಿರುದ್ಧ ವಾಗ್ಧಂಡನೆಗೆ ರಾಜ್ಯಸಭೆಯಲ್ಲಿ ವಿಪಕ್ಷಗಳು ಶುಕ್ರವಾರ ನೋಟಿಸ್ ನೀಡಿವೆ.
ಕಪಿಲ್ ಸಿಬಲ್, ದಿಗ್ವಿಜಯ್ ಸಿಂಗ್ ಸೇರಿ 55 ಸಂಸದರು ನೋಟಿಸ್‌ಗೆ ಸಹಿ ಹಾಕಿದ್ದಾರೆ. ನ್ಯಾಯಮೂರ್ತಿಯನ್ನು ಹುದ್ದೆಯಿಂದ ಕೆಳಗಿಳಿಸುವ ಪ್ರಕ್ರಿಯೆಗಳನ್ನು ರಾಜ್ಯಸಭೆ ಚೇರ್ಮನ್ನರು ಕೈಗೆತ್ತಿಗೊಳ್ಳಬೇಕು ಎಂದು ವಿಪಕ್ಷ ಸದಸ್ಯರು ಕೋರಿದ್ದಾರೆ. ವಿಎಚ್‌ಪಿ ಕಾರ್ಯಕ್ರಮದಲ್ಲಿ ನ್ಯಾ| ಶೇಖರ್ ತ್ರಿವಳಿ ತಲಾಕ್, ನಾಲ್ವರು ಹೆಂಡತಿಯರು, ಸಮಾನ ನಾಗರಿಕ ಸಂಹಿತೆ ಸೇರಿ ವಿವಾದಾತ್ಮಕ ಹೇಳಿಕೆಗಳ ಜತೆಗೆ, ದೇಶವು ಬಹುಸಂಖ್ಯಾಕರ ಅಣತಿಯಂತೆ ನಡೆಯಬೇಕು ಎಂದು ಹೇಳಿದ್ದರು.