ಮಡಿಕೇರಿ: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ರಮೇಶ್ ಎನ್ನುವವರು ಮೃತಪಟ್ಟಿದ್ದರು.ಹಾಗೂ ಗಂಭೀರ ಗಾಯಗೊಂದು ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಅವರ ಪತ್ನಿ ರೂಪಾ (38) ಅವರು ಸೋಮವಾರ ತಡರಾತ್ರಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟರು.ಇವರು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ರಮೇಶ್ ಅವರ ತಂದೆ ಕರಿಯಪ್ಪ (82) ಸಹ ಘಟನೆಯಲ್ಲಿ ಗಾಯಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಸ್ತೆಬದಿಯಲ್ಲಿ ವಾಸಿಸುತ್ತಿದ್ದ ನಿರ್ಗತಿಕರು, ವೃದ್ಧರು, ಅಂಗವಿಕಲರಿಗಾಗಿ ರಮೇಶ್ ಅವರು ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ತೊಂಡೂರಿನಲ್ಲಿ ಆಶ್ರಮ ಸ್ಥಾಪಿಸಿದ್ದರು.