ಬೆಂಗಳೂರು | ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಪ್ರಕರಣ | “ಇಂಟರ್ನೆಟ್ ಕ್ರೈಮ್’ಗೆ ಬಲಿಯಾಗಬೇಡಿ – ಎಚ್ಚರ ವಹಿಸಿ”

ಬೆಂಗಳೂರು: ಎಡಿಟ್‌ ಮಾಡಿದ ತಾಯಿಯ ನಗ್ನ ಪೋಟೋಗಳನ್ನು ಸಾಮಾ  ಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದ ರಿಸಿದ ಕಿಡಿಗೇಡಿಯೊಬ್ಬ ಆಕೆಯ ಪುತ್ರಿಯ ನಗ್ನ ಫೋಟೋಗಳನ್ನು ಪಡೆದು ವೈರಲ್‌ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಯುವತಿಯೊಬ್ಬಳು ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯಲಹಂಕದ ಕಾಲೇಜೊಂದರಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ 18 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿಯ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಸಂತ್ರಸ್ತೆಯ ತಂದೆ-ತಾಯಿಗೆ ಇಬ್ಬರು ಮಕ್ಕಳು. ತಂದೆ ರಸ್ತೆ ಅಪಘಾತದಲ್ಲಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಹೀಗಾಗಿ ಮನೆಯಲ್ಲಿ ತಾಯಿ, ತಮ್ಮ ಮತ್ತು ಸಂತ್ರಸ್ತೆ ಇದ್ದಾರೆ. ಸಂತ್ರಸ್ತೆ 2023ರ ಮೇನಿಂದ ಇನ್‌ಸ್ಟ್ರಾಗ್ರಾಂ ಖಾತೆ ತೆರೆದು ಬಳಸುತ್ತಿದ್ದಾರೆ. ಈ ನಡುವೆ ಸೆಪ್ಟೆಂಬರ್‌ನಲ್ಲಿ ಅಪರಿಚಿತ ತನ್ನ ಇನ್‌ಸ್ಟ್ರಾಗ್ರಾಂ ಖಾತೆಯಿಂದ ಸಂತ್ರಸ್ತೆಯ ಖಾತೆಗೆ ಎಡಿಟ್‌ ಮಾಡಿರುವ ಆಕೆಯ ತಾಯಿಯ ಅಶ್ಲೀಲ ಫೋಟೋ ಬಂದಿದೆ. ಅದನ್ನು ಕಂಡು ಆಕೆ ಆಘಾತಕ್ಕೊಳಗಾಗಿದ್ದಾಳೆ. ಅದೇ ವೇಳೆ ಅಪರಿಚಿತ “ನಿನ್ನ ನಗ್ನ ಫೋಟೋ ಕಳುಹಿಸು. ಇಲ್ಲವಾದರೆ ನಿನ್ನ ತಾಯಿಯ ನಗ್ನ ಫೋಟೋವನ್ನು ಸಾಮಾಜಿಕ ಜಾಲ  ತಾಣದಲ್ಲಿ ಹರಿಬಿಡುತ್ತೇನೆ’ ಎಂದು ಬೆದರಿಸಿದ್ದಾನೆ.ಇದರಿಂದ ಹೆದರಿದ ಸಂತ್ರಸ್ತೆ, ಆ ಅಪ ರಿಚಿತನಿಗೆ ತನ್ನ ನಗ್ನ ಫೋಟೋಗಳನ್ನು ಕಳುಹಿಸಿದ್ದಾರೆ. ಅದನ್ನು ದುರುಪಯೋಗಪಡಿಸಿ ಕೊಂಡ ಆರೋಪಿ, ಏ.9ರಂದು ಸಂತ್ರಸ್ತೆಯ ನಗ್ನ ಫೋಟೋಗಳನ್ನು ಇನ್‌ಸ್ಟ್ರಾಗ್ರಾಂನಲ್ಲಿ ಹಲ ವರಿಗೆ ಹಂಚಿದ್ದಾನೆ. ಅಲ್ಲದೆ, ಸಂತ್ರಸ್ತೆಯ ಮಾವನ ಫೇಸ್‌ಬುಕ್‌ ಖಾತೆಗೂ ಶೇರ್‌ ಮಾಡಿದ್ದಾನೆ. ಮೊದಲಿಗೆ ತಾಯಿಯ ಫೋಟೋ ವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ತನಗೆ ಕಳುಹಿಸಿ, ಬಳಿಕ ಬೆದರಿಸಿ ನನ್ನ ನಗ್ನ ಫೋಟೋ ಪಡೆದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅನಾಮಿಕ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಸಂತ್ರಸ್ತೆ ಕೋರಿದ್ದಾರೆ. ಈ ದೂರಿನ ಮೇರೆಗೆ ದುಷ್ಕರ್ಮಿ ಶೋಧಿಸ ಲಾಗು ತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Latest Indian news

Popular Stories