ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ ಶಾಸಕರು| ಕೆದಕಲ್ ಗ್ರಾಮ ಪಂಚಾಯಿತಿಯಲ್ಲಿ ಶಾಸಕ ಡಾ. ಮಂತರ್ ಗೌಡ ಸಮ್ಮುಖದಲ್ಲಿ ಅಧಿಕಾರಿಗಳ ತುರ್ತು ಸಭೆ


ಕೆದಕಲ್ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ , ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ನಡೆಸಿದರು.

ನಿನ್ನೆ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂಧರ್ಭ ಆರ್ ಆರ್ ಟಿ ಸಿಬ್ಬಂಧಿ ಗಿರೀಶ್ , ಕಾಡಾನೆ ದಾಳಿಗೊಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ಡಾ. ಮಂತರ್ ಗೌಡ ಸಂಭಂದಪಟ್ಟ ಅಧಿಕಾರಿಗಳ ಸಭೆ ಕರೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಿಬ್ಬಂಧಿಯ ಸಾವಿನ ಹಿನ್ನೆಲೆಯ ಮೇರೆಗೆ ಶಾಸಕರು ,ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿ ಕೊಡಗು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದಲೂ ಆನೆ-ಮಾನವ ಸಂಘರ್ಷಣೆ ಗಳು ನಡೆಯುತ್ತಿದ್ದರೂ ವ್ಯವಸ್ಥಿತವಾಗಿ ಸರ್ಕಾರದ ಗಮನಕ್ಕೆ ತರದೇ ನಿರ್ಲಕ್ಷ್ಯ ವಹಿಸಿದ್ದ ವಿಚಾರವಾಗಿ ಸಭೆಯಲ್ಲಿ ಆಜರಿದ್ದ ಅರಣ್ಯ ಅಧಿಕಾರಿಗಳಿಗೆ ಇನ್ನೂ ಮುಂದೆ ವನ್ಯ ಪ್ರಾಣಿಗಳಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮವಹಿಸಲು ಅದೇಶಿಸಿದರು.

ಕಾಡಿನಿಂದ ಆನೆಗಳು ಜನವಾಸ ಪ್ರದೇಶಗಳು, ತೋಟಗಳಿಗೆ ಬರದಂತೆ ರೈಲ್ವೆ ಬ್ಯಾರಿಗೇಟ್ ಗಳು, ಟ್ರೆಂಚ್ ಗಳು, ಸೋಲಾರ್ ತಂತಿಗಳನ್ನು ತತ್ ಕ್ಷಣವೇ ಅಳವಡಿಸುವಂತೆ ಸೂಚಿಸಿ ಅದಕ್ಕೆ ಸರ್ಕಾರದಿಂದ ಬೇಕಾಗುವ ಅನುದಾನಗಳನ್ನು ಕಲ್ಪಿಸಿಕೊಡುವೆ ಎಂದು ಶಾಸಕರು ಭರವಸೆ ನೀಡಿದರು.

ಈ ಸಂಧರ್ಭ ಗ್ರಾಮಸ್ಥರೊಂದಿಗೆ ಕಾಡಾನೆಗಳ ಹಾವಳಿ ವಿಚಾರವಾಗಿ ಶಾಸಕರು ಚರ್ಚಿಸಿ ಮಾಹಿತಿ ಪಡೆದುಕೊಂಡು ಅರಣ್ಯ ಅಧಿಕಾರಿಗಳೊಂದಿಗೆ ತಕ್ಷಣವೇ ಆನೆಗಳನ್ನು ಕಾಡಿಗಟ್ಟಲು ಬೇಕಾಗುವ ಸಂಪೂರ್ಣವಾದ ಸಹಕಾರ ಸರ್ಕಾರದಿಂದ ನೀಡುವುದಾಗಿ ಶಾಸಕರು ಭರವಸೆ ನೀಡಿದರು.

ಯಾವುದೇ ಸಂಧರ್ಭ ಗ್ರಾಮಸ್ಥರು ಅಧಿಕಾರಿಗಳಿಗೆ ಕರೆ ಮಾಡಿದ್ದಲ್ಲಿ ಕರೆಗಳಿಗೆ ಸ್ಪಂದಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳಾದ ಡಿ.ಎಫ್.ಓ ಎ.ಟಿ ಪೂವಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಮಡಿಕೇರಿ ಮತ್ತು ಕುಶಾಲನಗರ ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ, ಕುಶಾಲನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಪಿ ಶಶಿಧರ್, ಪಂಚಾಯಿತಿಯ ಸಿಬ್ಬಂಧಿಗಳು, ಕೆದಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರುಗಳು, ಕೆದಕಲ್, ಹೊರೂರು ಮಠ, ಬೂತನಕಾಡು, ಮೋದೂರು ಭಾಗದ ಗ್ರಾಮಸ್ಥರು, ಸಂತ್ರಸ್ತರು ಉಪಸ್ಥಿತರಿದ್ದರು.

Latest Indian news

Popular Stories