ಆರೋಗ್ಯ ಕಿಟ್ ವಿತರಣೆ : ಪೊಲೀಸರಿಗೆ ಜೀವಕ್ಕಿಂತ ಕರ್ತವ್ಯವೇ ಮುಖ್ಯ : ಡಿವೈಎಸ್‌ಪಿ ದಿನೇಶ್ ಕುಮಾರ್

ಮಡಿಕೇರಿ: ಜೀವಕ್ಕಿಂತ ಕರ್ತವ್ಯವೇ ಮುಖ್ಯ ಎನ್ನುವುದು ಪೊಲೀಸ್ ಇಲಾಖೆಯ ತತ್ವವಾಗಿದೆ. ಆದರೆ ಕೋವಿಡ್ ೨ನೇ ಅಲೆ ಅತ್ಯಂತ ಭೀಕರವಾಗಿದ್ದು, ಸಿಬ್ಬಂದಿಗಳು ಎಲ್ಲಿಯೂ ಮೈ ಮರೆಯುವಂತಿಲ್ಲ ಎಂದು ಮಡಿಕೇರಿ ಉಪ ವಿಭಾಗದ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಕಿವಿಮಾತು ಹೇಳಿದ್ದಾರೆ.
ಕೊಡಗು ಜಿಲ್ಲಾ ಔಷಧ ಮಾರಾಟ ವರ್ತಕರ ಸಂಘದ ವತಿಯಿಂದ ನಗರ ಸಂಚಾರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆರೋಗ್ಯ ಕಿಟ್‌ಗಳನ್ನು ವಿತರಿಸುವ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೊಲೀಸ್ ಸಿಬ್ಬಂದಿಗಳು ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸೋಂಕಿನ ಬಗ್ಗೆ ಸಿಬ್ಬಂದಿಗಳು ಹೆಚ್ಚು ಜಾಗೃತರಾಗಿರಬೇಕು. ಅನಗತ್ಯ ವಾಹನಗಳ ಸುತ್ತಾಟದ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಂಡು ತಪಾಸಣೆ ನಡೆಸುವಂತೆ ಸಲಹೆ ನೀಡಿದರು.
ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವೆಂದು ದಿನೇಶ್ ಕುಮಾರ್ ಹೇಳಿದರು.
ಔಷಧ ಮಾರಾಟ ವರ್ತಕರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ ಕೋವಿಡ್ ಸೋಂಕಿನಿAದ ಇಡೀ ದೇಶವೇ ತತ್ತರಿಸಿದ್ದು, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಜನರ ಜೀವ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಎರಡೂ ಇಲಾಖೆಗಳ ಕಾರ್ಯನಿರ್ವಹಣೆ ಶ್ಲಾಘನೀಯವೆಂದರು. ಸಂಕಷ್ಟದ ಸಂದರ್ಭದಲ್ಲೂ ಪೊಲೀಸ್ ಇಲಾಖೆ ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿದೆ. ಆದರೆ ಜನರು ಮಾತ್ರ ಕೋವಿಡ್ ೨ನೇ ಅಲೆಯ ಬಗ್ಗೆ ನಿರ್ಲಕ್ಷö್ಯವಹಿಸಿ ರಸ್ತೆಗೆ ಇಳಿದು ಅಲೆದಾಡುತ್ತಿದ್ದಾರೆ. ಪೊಲೀಸರ ಮಾತನ್ನೂ ಕೂಡ ಸಾರ್ವಜನಿಕರು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ಕೋವಿಡ್ ಸೋಂಕಿನ ಬಗ್ಗೆ ಎಲ್ಲಾ ಪೊಲೀಸ್ ಸಿಬ್ಬಂದಿಗಳು ಅತ್ಯಂತ ಎಚ್ಚರ ವಹಿಸಬೇಕು. ಎಲ್ಲಿಯೂ ಕಾನೂನು ಮತ್ತು ಕೋವಿಡ್ ಮಾರ್ಗಸೂಚಿಗಳು ಉಲ್ಲಂಘನೆಯಾಗದAತೆ ನೋಡಿಕೊಳ್ಳಬೇಕು ಮತ್ತು ಕರ್ತವ್ಯದೊಂದಿಗೆ ಮಾನವೀಯತೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದÀರು. ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ಕಂಡು ಬಂದಲ್ಲಿ ಬಲ ಪ್ರಯೋಗಿಸದೇ, ಕಾನೂನು ಮೂಲಕವೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸಂಚಾರಿ ಪೊಲೀಸ್ ಠಾಣಾಧಿಕಾರಿ ಬೆಳ್ಯಪ್ಪ, ಎಎಸ್‌ಐ ಐಮುಡಿಯಂಡ, ನಂದ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಔಷಧ ಮಾರಾಟ ವರ್ತಕರ ಸಂಘದಿAದ ಸುಮಾರು ೨೫ ಸಾವಿರ ರೂ. ಮೌಲ್ಯದ ಆರೋಗ್ಯ ಕಿಟ್‌ಗಳನ್ನು ಪೊಲೀಸರಿಗೆ ವಿತರಿಸಲಾಯಿತು. ಫೋಟೋ :: ಪೊಲೀಸ್

Latest Indian news

Popular Stories