ಕೊಡಗು :ಟ್ರೆಕ್ಕಿಂಗ್‌ಗೆ ಹೋದಾಗ ಹೃದಯಾಘಾತ, 23 ವರ್ಷದ ಯುವಕ ಮೃತ್ಯು

ಮಡಿಕೇರಿ: ಕೊಡಗಿಗೆ ಟ್ರೆಂಕ್ಕಿಗ್ ಗೆ ಬಂದಿದ್ದ ಯುವಕನೊಬ್ಬ ಹೃದಯಾಗಾತದಿಂದ ಮೃತಪಟ್ಟಿದ್ದಾನೆ.

ಭಾನುವಾರ ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿಯ ಕೊಡಗಿನ ಅತಿ ಎತ್ತರದ ತಡಿಯಂಡಮೋಳ್ ಶಿಖರವನ್ನು ಏರಿದ ನಂತರ ಹೃದಯಾಘಾತದಿಂದ ನಿಧನರಾದರು. ಯುವಕನನ್ನು ಹರಿಯಾಣ ಮೂಲದ ಜತಿನ್ (23) ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಬೆಳಿಗ್ಗೆ ತಡಿಯಂಡಮೋಲ್ ಶಿಖರವನ್ನು ಚಾರಣ ಮಾಡಲು ಯೋಜಿಸಿದ್ದರು. ಅವರು ಉತ್ತುಂಗವನ್ನು ತಲುಪಿದ ತಕ್ಷಣ, ಜತಿನ್ ಉಸಿರಾಟದ ಸಮಸ್ಯೆಗಳನ್ನು ಎದುರಿಸಿದರು. ಉಸಿರು ಕಟ್ಟಿಕೊಂಡು ಮೂರ್ಛೆ ಹೋದರು ಎಂದು ಮೂಲಗಳು ತಿಳಿಸಿವೆ.

ಕೂಡಲೇ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ಎಚ್ಚೆತ್ತು, ಶಿಖರಕ್ಕೆ ಧಾವಿಸಿ ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಜತಿನ್‌ನ ದೇಹವನ್ನು ಕೆಳಗೆ ತಂದರು. ಮೃತದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಜತೀನ್ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

Latest Indian news

Popular Stories