ಆನೆ ದಾಳಿಯಿಂದಾದ ಕೃಷಿ ನಷ್ಟ ಪ್ರದೇಶಕ್ಕೆ ಶ್ರೀ ಸಂಕೇತ್ ಪೂವಯ್ಯ ಭೇಟಿ

ಚೆಂಬು ಗ್ರಾಮದ ಡಬ್ಬಡ್ಕ ಭಾಗದಲ್ಲಿ ಕಳೆದೆರಡು ದಿನಗಳಿಂದ ಸತತವಾಗಿ ಆನೆ ದಾಳಿಯಿಂದಾಗಿ ಹಾನಿಗೀಡಾದ ತೋಟಗಳಿಗೆ, ವಿರಾಜಪೇಟೆ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣನವರ ನಿರ್ದೇಶನದ ಮೇರೆಗೆ, ಕೆಪಿಸಿಸಿ ರಾಜ್ಯ ವಕ್ತಾರರಾದ ಶ್ರೀ ಸಂಕೇತ ಪೂವಯ್ಯ ರವರು ಭೇಟಿ ನೀಡಿ ಕೃಷಿಕರೊಂದಿಗೆ ಸಮಾಲೋಚಿಸಿದರು.

ಸ್ಥಳಕ್ಕೆ ಸ್ಥಳೀಯ ಅರಣ್ಯಾಧಿಕಾರಿಗಳನ್ನು ಕರೆಸಿಕೊಂಡು ಅವರಿಂದ ವಿವರಣೆ ಪಡೆದ ಶ್ರೀ ಸಂಕೇತ್ ಪೂವಯ್ಯರವರು *ಶಾಸಕರ ನಿರ್ದೇಶನದಂತೆ ಕೂಡಲೇ ಸ್ಥಳ ಪರೀಶೀಲನೆ* ಮಾಡಿ ಸೂಕ್ತ *ಪರಿಹಾರವನ್ನು ವೈಜ್ಞಾನಿಕವಾಗಿ* ನೀಡಬೇಕೆಂಬ *ಶಾಸಕರ ಸಂದೇಶವನ್ನು* ಅಧಿಕಾರಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಗ್ರಾಮಸ್ಥರು, ಆನೆ ಹಾವಳಿ ಕಳೆದ 20 ವರ್ಷದಿಂದಲೂ ಇದ್ದು, ಈವರೆಗೆ ಯಾರೂ ಪೂರಕವಾಗಿ ಸ್ಪಂದಿಸುತ್ತಿರಲಿಲ್ಲ ಹಾಗೂ ಅರಣ್ಯ ಇಲಾಖೆಯಿಂದ ಕೂಡ ಸೂಕ್ತ ರೀತಿಯಲ್ಲಿ ಪರಿಹಾರ ದೊರಕುತ್ತಿರಲಿಲ್ಲ ಎಂದು ದೂರಿದರು. ಇದನ್ನು ಆಲಿಸಿದವರು ಶ್ರೀ ಸಂಕೇತ್ ಪೂವಯ್ಯರವರು ಕೂಡಲೇ ಶಾಸಕರಿಗೆ ವಿಷಯ ತಿಳಿಸಿದರು. *ಕ್ಷಿಪ್ರವಾಗಿ ಸ್ಪಂದಿಸಿದ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣ* ರವರು ಅಧಿಕಾರಿಗಳೊಂದಿಗೆ ಮಾತನಾಡಿದ ಕೂಡಲೇ ಬೆಳೆ ಹಾನಿ ನಷ್ಟಕ್ಕೆ ಅಗತ್ಯ ಪರಿಹಾರವನ್ನು ವಿತರಿಸುವಂತೆ ಸೂಚಿಸಿದರಲ್ಲದೆ ಆನೆ ದಾಳಿ ತಡೆಗೆ ಬೇಕಾದಂತಹ ಎಲ್ಲಾ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ *ಶ್ರೀ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪಿಎಲ್, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀ ಆದಮ್, ಶ್ರೀ ಗಿರೀಶ್ ಹೊಸೂರು, ಶ್ರೀಮತಿ ಕುಸುಮ ಯೋಗೀಶ್ವರ್*, ಹಿರಿಯರಾದ ಜೀವಿ ಗಣಪಯ್ಯ, ಸೋಮಣ್ಣ ಬಾಲಂಬಿ, ತಿರುಮಲ ಸೋನ, ವಾಸು ಪೂಜಾರಿ, ಹನೀಫ್ ಸಂಪಾಜೆ, ಭುವನೇಶ್ವರ ಕೊಪ್ಪದ, ರಘುನಾಥ್ ಬಾಲಂಬಿ, ಸ್ಥಳೀಯರಾದ ಗಿರೀಶ್ ಕೆದಂಬಾಡಿ, ದಿನಕರ ಗುಂಡಿಯ, ನಾಗೇಶ ಕಿರ್ಲಾಯ ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories