
Madikeri
ಕಾರ್ಯಕ್ರಮಗಳಲ್ಲಿ ಡಿಜೆ ಹಾಗೂ ಲೇಜರ್ ಲೈಟ್ ಬಳಸುವಂತಿಲ್ಲ ಹಿರಿಯ ವಕೀಲರಿಂದ ನೋಟಿಸ್
ಮಡಿಕೇರಿಯ ದಸರಾದಲ್ಲೂ ಡಿಜೆ,ಲೇಸರ್ ಲೈಟ್ ಬಳಕೆಗೆ ಆಕ್ಷೇಪ
ಹೈಕೋರ್ಟ್ ವಕೀಲರು,ಸಾಮಾಜಿಕ ಹೋರಾಟಗಾರ ಅಮೃತೇಶ್ ಎನ್.ಪಿ. ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಡಿಮೆ ಶಬ್ದ ಬಳಸಿ ರಾತ್ರಿ ಹತ್ತು ಗಂಟೆಗೆ ಬಂದ್ ಮಾಡಬೇಕು ಒಂದು ವೇಳೆ ಡಿಜೆ ಬಳಸಿದರೆ ಹೈಕೋರ್ಟ್ ಗೆ ಹೋಗಲು ನಿರ್ಧಾರ ಮಾಡಿದ್ದೇವೆ ಎಂದ ಅವರು
ಈ ಬಗ್ಗೆ ಅಧಿಕಾರಿಗಳು,ದಸರಾ ಸಮಿತಿಯವರಿಗೆ ನೋಟಿಸ್ ನೀಡಲಾಗಿದೆ ಎಂದರು.
ಆದರೆ ವರ್ಷದಿಂದ ವರ್ಷಕ್ಕೆ ಶಬ್ದಗಳು ಹೆಚ್ಚಾಗುತ್ತಿದೆ.ಇದರಿಂದಾಗಿ ಶಬ್ದ ಮಾಲಿನ್ಯಗಳಿಂದ ಸಾರ್ವಜನಿಕರು ಜನಸಾಮಾನ್ಯರಿಗೆ ತೊಂದರೆ ಯಾಗುತಿದೆ.
ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದೆ. ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ ವೈಕ್ತಪಡಿಸಿದರು
ಇದುವರೆಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದ್ದರೂ ಸ್ಪಂದನೆ ತೋರುತ್ತಿಲ್ಲ. ಎಂದು ವಕೀಲ ಅಮೃತೇಶ್
ಪತ್ರಿಕಾಗೋಷ್ಠಿಯ ಮುಖಾಂತರ ಎಚ್ಚರಿಕೆ ನೀಡಿದರು




