Madikeri

ಮಾದಕ ವಸ್ತು ಮಾರಾಟ : ಕಾಸರಗೋಡುವಿನ ಇಬ್ಬರ ಬಂಧನ

ನಿಷೇಧಿತ ಮಾದಕ ವಸ್ತು MDMA ಅನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿ – ಕುಶಾಲನಗರ ಮಾರ್ಗ ಮಧ್ಯದ ಕಾಮಾನ್ ಗೇಟ್ ಜಂಕ್ಷನ್ ಹತ್ತಿರ ಇಂದು ನಿಷೇಧಿತ ಮಾದಕ ವಸ್ತು MDMA ಅನ್ನು ಮಾರಾಟ/ ಸರಬರಾಜು ಮಾಡುತ್ತಿದ್ದ ಕೇರಳ ರಾಜ್ಯ ಕಾಸರಗೋಡುವಿನ ಟಿ.ಎಂ. ಅಮೀರ್ (28) ಮತ್ತು ಕೆ. ಮಹಮ್ಮದ್ ಶಬೀರ್ (30) ಎಂಬಿಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ನಿಷೇಧಿತ 20 ಗ್ರಾಂ. ಮಾದಕ ವಸ್ತು MDMA ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button