ಮಡಿಕೇರಿ: ಜಾತ್ಯತೀತಯ ಭಾರತದಲ್ಲಿ ಸೌಹಾರ್ದ ಸಮಾಜ‌ ನಿರ್ಮಾಣವಾಗಲಿ:ಗಣ್ಯರ ಅಭಿಮತ

ನೆಲ್ಯಹುದಿಕೇರಿಯಲ್ಲಿ ಎಸ್ ವೈ ಎಸ್ ಸಂಘಟನೆಯಿಂದ
ರಾಷ್ಟ್ರ ರಕ್ಷಾ ಸಂಗಮ

ಮಡಿಕೇರಿ , ಆ. 16:ವಿವಿಧತೆಯಲ್ಲಿ ಏಕತೆಯನ್ನು ಸಾರಿರುವ ಭಾರತ ವಿಶ್ವದಲ್ಲೇ ಶ್ರೇಷ್ಠ ಸ್ಥಾನ ಪಡೆದಿದೆ.ಜಾತ್ಯಾತೀತತೆ ಭಾರತದ ಧರ್ಮ ಎಂಬ ಘೋಷಣೆಯೊಂದಿಗೆ ಜಾತ್ಯಾತೀತತೆಯನ್ನು ಉಳಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಎಸ್.ವೈ.ಎಸ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನೆಲ್ಲಿಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ರಾಷ್ಟ್ರ ರಕ್ಷಾ ಸಂಗಮ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಜಿಲ್ಲಾ ಸಹಾಯಕ ಖಾಝಿ ಎಂ.ಎಂ ಅಬ್ದುಲ್ಲ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.


ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ಇಂದಿಗೂ ಗ್ರಾಮೀಣ ಭಾಗದ ಜನರು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.


ನಮ್ಮ ಚಿಂತನೆಗಳ ಮೂಲಕ ಪರಿಹಾರ ಕಂಡುಕೊಳ್ಳಲು
ನಾವೆಲ್ಲರೂ ಮುಂದಾಗಬೇಕಾಗಿದೆ. ಪ್ರತಿಯೊಬ್ಬರ ಆಶಯದಂತೆ ಅಭಿವೃದ್ಧಿಯ ಮೂಲಕ ಭವಿಷ್ಯ ರೂಪಿಸಿಕೊಂಡಲ್ಲಿ
ಸೌಹಾರ್ದ ಸಮಾಜ ನಿರ್ಮಾಣವಾಗಲಿದೆ ಎಂದರು.


ಚೆಟ್ಟಳ್ಳಿ ಚರ್ಚ್ ನ ಧರ್ಮಗುರುbಫಾದರ್ ಜೆರಾಲ್ಡ್ ಸಿಕ್ವೇರಾ ಕಾರ್ಯಕ್ರಮದಲ್ಲಿ ಮಾತನಾಡಿ ಮನುಷ್ಯತ್ವ ಇಲ್ಲದ ಜೀವನ ಪ್ರಾಣಿಯ ಜೀವನವಾಗುತ್ತೆ. ಪ್ರೀತಿಯಿಲ್ಲದ ಜೀವನ ದ್ರೋಹದ ಜೀವನವಾಗಲಿದೆ.
ಧರ್ಮದ ಆಚರಣೆಯಲ್ಲಿ ಮನುಷ್ಯತ್ವ ಇರಬೇಕಾಗಿದ್ದು ಹಾಡುವ ಮಾತುಗಳು ಮುತ್ತಿನಂತಿರಬೇಕಾಗಿದೆ.


ಶಾಂತಿಯ ದಾರಿ ಪ್ರೀತಿಯನ್ನು ಹಂಚಿ ಸೌಹಾರ್ದ ಜೀವನ ನಡೆಸಲು ಇಂತಹ ಜಾತ್ಯಾತೀತೇಯ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ.
ಭಾರತ ಸಂವಿಧಾನ ಎಲ್ಲರನ್ನ ಒಟ್ಟಗೂಡುವುದಕ್ಕೆ ಸಮಾನತೆ ನೀಡುತ್ತಿದೆ
ಅದರಿಂದಲೇ ನಾವೆಲ್ಲರೂ ಶಾಂತಿ ಸಹ ಬಾಳ್ವೆಯೊಂದಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ.


ದೇಶದಲ್ಲಿ ಹೊಸ ಸಂವಿಧಾನ ರಚನೆಯಾದರೆ ಎಲ್ಲವೂ ನಾಶವಾಗಲಿದೆ. ಭಾರತ ಸಂವಿಧಾನ ಉಳಿಸಲು ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.


ಸಕಲೇಶಪುರ ಆನೆಮಹಲ್ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ ಭವ್ಯ ಭಾರತ ದೇಶವನ್ನು ಕಟ್ಟಲು ಎಲ್ಲಾ ಮಹಾತ್ಮರು ಹಲವಾರು ತ್ಯಾಗಗಳನ್ನು ಮಾಡಿದ್ದಾರೆ.


ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊಂದಿಗೆ ಭಾರತ ದೇಶ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ.


ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪಾರಂಪರಿಕ ಕಟ್ಟಡಗಳು ಇಂದಿಗೂ ವಿಶ್ವದಲ್ಲೇ ಗಮನ ಸೆಳೆಯುತ್ತಿವೆ. ದೇಶದಲ್ಲಿ ಪ್ರತಿಯೊಬ್ಬರ ಕೊಡುಗೆಗಳು ಅಪಾರವಾಗಿದ್ದು‌ ಸುಸಂಸ್ಕೃತ ಭಾರತ ದೇಶದಲ್ಲಿ ನಾವೆಲ್ಲರೂ ಸೌಹಾರ್ದ ಜೀವನ ನಡೆಸುವಂತಾಗಿದೆ ಎಂದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿ ಕರ್ನಾಟಕದ ಇತಿಹಾಸದಲ್ಲೇ ನುಡಿದಂತೆ ನಡೆದುಕೊಳ್ಳುವುದರ ಮೂಲಕ ಘೋಷಣೆ ಮಾಡಿದ ಭರವಸೆಗಳನ್ನ ಈಡೇರಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಯೊಂದಿಗೆ ಮುಖ್ಯ ವಾಹಿನಿಗೆ ತರಲು ಸರ್ಕಾರ ಮುಂದಾಗಿದ್ದು ಜನಪರ ಯೋಜನೆಗಳನ್ನ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಮುಖ್ಯವಾಹಿನಿಗೆ ಬರಬೇಕೆಂದರು.
ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಮಾತನಾಡಿ ಸಮಸ್ತದ ಎಸ್ ವೈ ಎಸ್ ಸಂಘಟನೆ ಹಲವು ವರ್ಷಗಳಿಂದ ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದು
ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ.


ಜಾತ್ಯಾತೀತಯ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.


ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ ಚೋಕಂಡಳ್ಳಿ,ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ,ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷರು ಯಾಕುಬ್ ಬಜೆಗುಂಡಿ, ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಸಮಿತಿ ಅಧ್ಯಕ್ಷ ತಮ್ಲೀಕ್ ದಾರಿಮಿ,ಸಮಸ್ತ ಜಂಇಯ್ಯತುಲ್ ಉಲಮ ಪ್ರಧಾನ ಕಾರ್ಯದರ್ಶಿ,ಎ ಸಿ ಉಸ್ಮಾನ್ ಫೈಝಿ,ಸುನ್ನಿ ಮಹಲ್ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ ಹಮಿದ್ ಮೌಲವಿ ಸುಂಟಿಕೊಪ್ಪ, ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಅಲಿ, ಪ್ರಧಾನ ಕಾರ್ಯದರ್ಶಿ ಎಂ ವೈ ಅಶ್ರಫ್ ಫೈಝಿ,ಎಸ್ ವೈ ಎಸ್ ಆಮಿಲ ಜಿಲ್ಲಾ ಸಮಿತಿ ಅಧ್ಯಕ್ಷ ಹಾರಿಸ್ ಕಡಂಗ, ಅಬ್ದುಲ್ ರೆಹಮಾನ್ ಬಾಪು ಸೇರಿದಂತೆ ಮತ್ತಿತರರು ಹಾಜರಿದ್ದರು.
-ಎಸ್ .ಎಂ ಮುಬಾರಕ್

Latest Indian news

Popular Stories