Madikeri

ನಿರ್ಗತಿಕ ಮಕ್ಕಳ ಬಗ್ಗೆ ಮಾಹಿತಿ ನೀಡಲು ಮನವಿ

ಮಡಿಕೇರಿ : ಕೋವಿಡ್ -೧೯ ನಿಂದ ಪೋಷಕರಿಬ್ಬರು ಮೃತಪಟ್ಟು ಅನಾಥರಾದ ಮಕ್ಕಳ ಬಗ್ಗೆ ಮಾಹಿತಿ ಇದ್ದಲ್ಲಿ ಅವರ ರಕ್ಷಣೆ ಮತ್ತು ಪೋಷಣೆ ದೃಷ್ಟಿಯಿಂದ ಅಂತಹ ಮಕ್ಕಳಿರುವ ಮಾಹಿತಿಯನ್ನು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ, ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ಆಥವಾ ೧೧೨, ೧೦೯೮ ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.
ಅನಾಥ ಮಕ್ಕಳ ಮುಂದಿನ ಪಾಲನೆ, ಪೋಷಣೆ, ರಕ್ಷಣೆ ಮತ್ತು ಪುನರ್ ವಸತಿ ಕಲ್ಪಿಸುವ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಈಗಾಗಲೇ ಕೋವಿಡ್-೧೯ ನಿಂದ ತಂದೆಯನ್ನು ಕಳೆದುಕೊಂಡ ನೊಂದ ಬಾಲಕಿಗೆ ಆಹಾರ ಸಾಮಾಗ್ರಿ ನೀಡುವಂತೆ ೧೦೯೮ ಕ್ಕೆ ಕರೆ ಮಾಡಿ ತಿಳಿಸಿದ್ದು, ಈ ವಿಚಾರ ತಿಳಿದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಅವರ ಮನೆಗೆ ತೆರಳಿ ಅವರ ಯೋಗ ಕ್ಷೇಮವನ್ನು ವಿಚಾರಿಸಿಕೊಂಡು ಅವರಿಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಹಾಗೂ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅವರು ಸೇರಿಕೊಂಡು ಅವರಿಗೆ ಆಹಾರ ಸಾಮಾಗ್ರಿ ಒದಗಿಸಿದ್ದಾರೆ.
ಅಂತೆಯೇ ಸೋಮವಾರಪೇಟೆ ತಾಲ್ಲೂಕು ಕೂಡಿಗೆ ಗ್ರಾಮದಲ್ಲಿ ತಂದೆ ತಾಯಿಯಿಂದ ಪರಿತ್ಯಜಿಸಲ್ಪಟ್ಟು ಅಜ್ಜ ಅಜ್ಜಿಯೊಂದಿಗೆ ವಾಸವಿರುವ ೭ ವರ್ಷದ ಬಾಲಕಿ ತಮಗೆ ಜೀವಿಸಲು ಕಷ್ಟವಾಗುತ್ತಿದ್ದು, ತನ್ನ ಅಜ್ಜ ಅಜ್ಜಿಗೆ ಕೆಲಸ, ಸೂರು ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಇದ್ದು, ಆಹಾರ ಸಾಮಾಗ್ರಿಗಳ ಅವಶ್ಯಕತೆ ಇರುವುದಾಗಿ ೧೦೯೮ ಕ್ಕೆ ಕರೆಮಾಡಿ ತಿಳಿಸಿದ್ದು, ಈ ವಿಚಾರ ತಿಳಿದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಅವರ ಮನೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಅವರಿಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಹಾಗೂ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಅರತಿ ಸೋಮಯ್ಯ ಅವರು ಆಹಾರ ಸಾಮಾಗ್ರಿ ನೀಡುವ ಮೂಲಕ ನೆರವು ನೀಡಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button