Madikeri

ಸುಬೆೆÃದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ದುರುದ್ದೇಶದ ಹೇಳಿಕೆ

ಮಡಿಕೇರಿ ಏ.೨೩ : ಸ್ವಾತಂತ್ರö್ಯ ಹೋರಾಟಗಾರರಾದ ಸುಬೆÉÃದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಬಲಿದಾನವನ್ನು ಸ್ಮರಿಸದೆ, ಅವರ ವಿರುದ್ಧ ಹೇಳಿಕೆಗಳನ್ನು ನೀಡುವುದು ಈ ಮಣ ್ಣಗೆ ಮಾಡುವ ಅಪಮಾನವೆಂದು ವಕೀಲ ಕೆ.ಆರ್.ವಿದ್ಯಾಧರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಟೆಯಲ್ಲಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ನಿಮಾಣಕ್ಕೆ ಸಂಬAಧಿಸಿದ ದಾವೆಗೆ ಕಾವೇರಿಸೇನೆಯ ಅಧ್ಯಕ್ಷ ರವಿಚಂಗಪ್ಪ ಹಾಗೂ ವಕೀಲ ಬಿ.ಎ.ಮಾಚಯ್ಯ ಅವರುಗಳು ನಿಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಬ್ರ‍್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿ ಮಡಿಕೇರಿಯಲ್ಲಿ ಕೋಟೆಯ ಆವರಣದಲ್ಲಿ ಗಲ್ಲಿಗೇರಿಸಲ್ಪಟ್ಟ ಏಕೈಕ ಸ್ವಾತಂತ್ರö್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರಾಗಿದ್ದಾರೆ. ಅವರನ್ನು ‘ಅನಾಮಧೇಯ’ ಎಂದು ಹೇಳಿಕೆಗಳನ್ನು ನೀಡುವವರು ವಿಘ್ನ ಸಂತೋಷಿಗಳೇ ಆಗಿದ್ದಾರೆ ಎಂದು ಟೀಕಿಸಿದರು.
ಮಡಿಕೇರಿಯ ಕೊಟೆ ಆವರಣದಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ನಿರ್ಮಿಸಬೇಕೆನ್ನುವ ಕಾವೇರಿ ಜನ್ಮಭೂಮಿ ಟ್ರಸ್ಟ್ ಮತ್ತು ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯ ದಾವೆಯನ್ನು ಮಡಿಕೇರಿಯ ಅಪರ ಸಿವಿಲ್ ನ್ಯಾಯಾಲಯ ವಜಾಗೊಳಿಸಿಲ್ಲ. ಬದಲಾಗಿ ತನ್ನ ವ್ಯಾಪ್ತಿಗೆ ಬರುವುದಿಲ್ಲವೆಂದು ನ್ಯಾಯಾಲಯ ತಿಳಿಸಿದ್ದು, ದಾವೆಗೆ ಸಂಬAಧಿಸಿದAತೆ ಇತಿಹಾಸದ ಪೂರ್ಣ ವಿಶ್ಲೇಷಣೆ ಇಲ್ಲಿ ನಡೆದಿಲ್ಲವೆಂದು ಕೆ.ಆರ್.ವಿದ್ಯಾಧರ್ ಸ್ಪಷ್ಟಪಡಿಸಿದರು.
::: ಅಪ್ಪಯ್ಯ ಗೌಡರ ಬಗ್ಗೆ ದಾಖಲೆಗಳಿದೆ :::
ಗುಡ್ಡೆಮನೆ ಅಪ್ಪಯ್ಯ ಗೌಡರು ಬ್ರಿಟೀಷರ ವಿರುದ್ಧ ೧೮೩೭ ರಲ್ಲಿ ನಡೆಸಿದ ಹೋರಾಟಗಳ ಕುರಿತ ಮಾಹಿತಿಗಳು ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ತಮಿಳುನಾಡಿನ ಪತ್ರಾಗಾರದಲ್ಲಿ ಇರುವುದಾಗಿ ತಿಳಿಸಿದÀ ಕೆ.ಆರ್. ವಿದ್ಯಾಧರ್, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ‘ಸುಳ್ಯ ದಂಗೆ’ ಎಂದೇ ಪ್ರಸಿದ್ಧವಾಗಿರುವ ಹೋರಾಟದಲ್ಲಿ ಪಾಲ್ಗೊಂಡ ಕೊಡಗಿನ ಪ್ರಮುಖರಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರು ಮತ್ತು ಪುಟ್ಟಬಸಪ್ಪ ಅವರು ಪ್ರಮುಖರಾಗಿದ್ದಾರೆ. ಇವರಲ್ಲಿ ಪುಟ್ಟಬಸಪ್ಪ ಅವರನ್ನು ಬ್ರಿಟಿಷರು ಮಂಗಳೂರಿನಲ್ಲಿ ಗಲ್ಲಿಗೇರಿಸಿದರೆ, ಅಪ್ಪಯ್ಯ ಗೌಡರು ಮಡಿಕೇರಿಯ ಕೋಟೆಯಾವರಣದಲ್ಲಿ ಗಲ್ಲಿಗೇರಿಸಲ್ಪಟ್ಟು ಹುತಾತ್ಮರಾಗುತ್ತಾರೆಂದು ಮಾಹಿತಿ ನೀಡಿದರು.
೧೯೫೭ರಲ್ಲಿ ಅಂದಿನ ಬಾಂಬೆ ಸರ್ಕಾರ ಬ್ರಿಟಿಷರ ವಿರುದ್ಧ ಹೋರಾಟಗಳ ಸಮಗ್ರ ದಾಖಲೀಕರಣ ನಡೆಸಿದ್ದು, ಆ ಹಂತದಲ್ಲಿ ರಾಜ್ಯದಲ್ಲಿ ನಡೆದ ಬ್ರಿಟಿಷರ ವಿರುದ್ಧದ ಹೋರಾಟಗಳನ್ನು ತಿ.ತಾ.ಶರ್ಮ ಅವರು ದಾಖಲಿಸಿದ್ದಾರೆ. ಅದರಲ್ಲಿಯೂ ಗುಡ್ಡೆಮನೆ ಅಪ್ಪಯ್ಯಗೌಡರ ಹೋರಾಟ ದಾಖಲಾಗಿದೆಯೆಂದು ತಿಳಿಸಿದರು.
ನಾಡಿನ ಸ್ವಾತಂತ್ರö್ಯಕ್ಕಾಗಿ ಹೋರಾಟ ನಡೆಸಿದ ಸ್ವಾತಂತ್ರö್ಯ ಹೋರಾಟಗಾರರನ್ನು ಸ್ಮರಿಸುವುದಕ್ಕೆ ಬದಲಾಗಿ ಅವರ ವಿರುದ್ಧವಾದ ಹೇಳಿಕೆಗಳನ್ನು ನೀಡುವುದರ ಹಿಂದೆ, ಕೊಡಗಿನ ಪ್ರಮುಖ ಎರಡು ಜನಾಂಗಗಳ ನಡುವೆ ಕಲಹವೇರ್ಪಡಿಸುವ ಉದ್ದೇಶ ಅಡಗಿದೆ ಎಂದು ಕೆ.ಆರ್.ವಿದ್ಯಾಧರ್ ಆರೋಪಿಸಿದರು. ಫೋಟೋ :: ವಿದ್ಯಾಧರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button