Manglore

ಸ್ಕೌಟ್ ಮತ್ತು ಗೈಡ್ಸ್ ಇದರ ಜಿಲ್ಲಾ ಮಟ್ಟದ ಪ್ರಾಥಮಿಕ ತರಬೇತಿ ಶಿಬಿರ

ಇಲ್ಲಿನ ಪ್ರತಿಷ್ಠಿತ ವಸತಿಯುತ ವಿದ್ಯಾ ಸಂಸ್ಥೆಯಾಗಿರುವ ಸುದಾನ ಶಿಕ್ಷಣ ಸಂಸ್ಥೆಯಲ್ಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಇದರ ಆರು ದಿನಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು

ಪುತ್ತೂರು, ಸೆ. 22: ಇಲ್ಲಿನ ಪ್ರತಿಷ್ಠಿತ ವಸತಿಯುತ ವಿದ್ಯಾ ಸಂಸ್ಥೆಯಾಗಿರುವ ಸುದಾನ ಶಿಕ್ಷಣ ಸಂಸ್ಥೆಯಲ್ಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಇದರ ಆರು ದಿನಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಇದರಲ್ಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಪುತ್ತೂರು ಸ್ಥಳೀಯ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಕಬ್ ಮಾಸ್ಟರ್, ಫ್ಲಾಕ್ ಲೀಡರ್, ಸ್ಕೌಟ್ ಮಾಸ್ಟರ್, ಗೈಡ್ ಕ್ಯಾಪ್ಟನ್ ಗಳ ಪ್ರಾಥಮಿಕ ತರಬೇತಿ ಶಿಬಿರವು, ಸೆಪ್ಟೆಂಬರ್ 22 ರಿಂದ 29 ರವರೆಗೆ ನಡೆಯಲಿದ್ದು. ಇದರ ಉದ್ಘಾಟನಾ ಸಮಾರಂಭವು ದಿನಾಂಕ 22-09-2025 ರಂದು ಸುದಾನ ವಸತಿಯುತ ಶಾಲೆ ಪುತ್ತೂರು ಇಲ್ಲಿ ಬಹಳ ಸರಳವಾಗಿ ನಡೆಯಿತು.

ಪುತ್ತೂರು ಸ್ಥಳೀಯ ಸುದಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಜಯ ಹಾರ್ವಿನ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀಯುತ ವಿಷ್ಣು ಪ್ರಸಾದ್, ಶ್ರೀಯುತ ಹರಿ ಪ್ರಸಾದ್ BRP, ಜಿಲ್ಲಾ ಸ್ಕೌಟ್ ಆಯುಕ್ತರಾಗಿರುವ ಶ್ರೀ ಬಿ. ಎಂ. ತುಂಬೆ, ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಶ್ರೀ ಶ್ರೀಧರ್ ರೈ, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ, ಗಡಿಯಾರ ಇಲ್ಲಿನ ಸಂಚಾಲಕರಾಗಿರುವ ಶ್ರೀ ಅಬ್ದುಲ್ ಖಾದರ್ ಕುಕ್ಕಾಜೆ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಕೆ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ವಿದ್ಯಾ ಆರ್ ಗೌರಿ, ಶಿಬಿರ ನಾಯಕಿ ಶ್ರೀಮತಿ ಸುನೀತಾ, ಶಿಬಿರ ಸಹಾಯಕರಾದ ಶ್ರೀಮತಿ ಫೆಲ್ಸಿ ಫೆರ್ನಾಂಡಿಸ್, ಶ್ರೀಮತಿ ಅಕ್ಕಮ್ಮ, ಶ್ರೀ ಮೋಹನ್, ಶ್ರೀ ಚಂದ್ರಕ್ಷ ,ಶ್ರೀಮತಿ ಮೇಬಲ್ ಡಿ ಸೋಜಾ,ಶ್ರೀಮತಿ ಅನುರಾಧ, ಶ್ರೀಮತಿ ಗೀತಾ ಆಚಾರ್, ಶ್ರೀಮತಿ ಶೈನಿ ಉಪಸ್ಥರಿದ್ದರು.

ಈ ಶಿಬಿರದಲ್ಲಿ ಕಬ್ ವಿಭಾಗದಲ್ಲಿ 16, ಬುಲ್ ಬುಲ್ ವಿಭಾಗದಲ್ಲಿ 17, ಸ್ಕೌಟ್ ವಿಭಾಗದಲ್ಲಿ 20, ಗೈಡ್ ವಿಭಾಗದಲ್ಲಿ 22 ಒಟ್ಟು 75 ಶಿಕ್ಷಕರು ಭಾಗವಹಿಸುತ್ತಿದ್ದಾರೆ.

Back to top button