ಥಾಣೆ, ಮೇ 24 (ಪಿಟಿಐ) – ಮಹಾರಾಷ್ಟ್ರದ ಥಾಣೆ ಜಿಲ್ಲೆ ಡೊಂಬಿವಿಲಿಯ ಎಂಐಡಿಸಿಯ 2ನೇ ಹಂತದಲ್ಲಿರುವ ಅಮುದನ್ ಕೆಮಿಕಲ್ಸ್ ಘಟಕದಲ್ಲಿ ನಡೆದ ಸ್ಫೋಟದಲ್ಲಿ ಮೃತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಹಸೀಲ್ದಾರ್ ಸಚಿನ್ ಶೆಜಲ್ ಅವರು ಮಾಹಿತಿ ನೀಡಿ ಧ್ವಂಸಗೊಂಡ ಕಾರ್ಖಾನೆಯ ಆವರಣದಲ್ಲಿ ಹೆಚ್ಚಿನ ಶವಗಳು ಬಿದ್ದಿವೆ ಎಂದು ಅವರು ಶಂಕಿಸಿರುವುದರಿಂದ ಇದು ಹೆಚ್ಚಾಗಬಹುದು.
ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ ಪ್ರಸ್ತುತ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ ಹೇಳಿದರು.
ಸುತ್ತಮುತ್ತಲಿನ ಕಾರ್ಖಾನೆಗಳ ಅನೇಕ ಮಹಿಳೆಯರು ಸೇರಿದಂತೆ 64 ಜನರು ಗಾಯಗೊಂಡಿದ್ದು ಆರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಡೊಂಬಿವಿಲಿಯ ಏಮ್ಸೌ ಆಸ್ಪತ್ರೆಯಲ್ಲಿ 24 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ನಿನ್ನೆ ಮಧ್ಯಾಹ್ನ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡಿತು ಇದರ ಪರಿಣಾಮ ಬೆಂಕಿಯುಹೊತ್ತಿಕೊಂಡು ಅಕ್ಕ ಪಕ್ಕದ ಕಾರ್ಖಾನೆಗಳು ಮತ್ತು ಮನೆಗಳ ಕೂಡ ಹಾನಿಯಾಗಿದೆ.
ಬೆಂಕಿ ನಂದಿಸಲು ಹತ್ತು ಅಗ್ನಿಶಾಮಕ ವಾಹನಗಳನ್ನು ಬಳಸಲಾಗಿ ಮಧ್ಯರಾತ್ರಿವರೆಗೂ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಯ ವಿಪತ್ತು ನಿರ್ವಹಣಾ ಕೋಶದ ಕೈಲಾಸ್ ನಿಕಮ್ ಹೇಳಿದರು. ಇಡೀ ಪ್ರದೇಶವು ಸುಟ್ಟ ರಾಸಾಯನಿಕದ ಕೆಟ್ಟ ವಾಸನೆಯಿಂದ ತುಂಬಿದೆ ಪರಿಹಾರ ಕಾರ್ಯಾಚರಣೆ ನಡೆದಿದೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಡೊಂಬಿವಿಲಿಯ ಮಾನ್ಪಾಡಾ ಪೊಲೀಸರು ಕಾರ್ಖಾನೆ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆ 304 ಎ (ಅಪರಾಧೀಯ ನರಹತ್ಯೆ) ಮತ್ತು ಸ್ಫೋಟಕ ವಸ್ತುಗಳು ಮತ್ತು ಅಪಾಯಕಾರಿ ರಾಸಾಯನಿಕಗಳ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.