ಡಾಕ್ಟರ್‌ ಆಗಬೇಕಿತ್ತು, ಒಳ್ಳೆ ಮಾರ್ಕ್ಸ್ ಬರದಿದ್ದಕ್ಕೆ ಇಂದು ನಾನು ಮುಖ್ಯಮಂತ್ರಿ ಆದೆ: ಸಿದ್ದರಾಮಯ್ಯ

ಮೈಸೂರು,ಡಿಸೆಂಬರ್‌ 22: ನಾನು ಡಾಕ್ಟರ್ ಆಗಬೇಕು ಆಸೆ ಇತ್ತು. ಅದರೆ ಮಾರ್ಕ್ಸ ಬರಲಿಲ್ಲ.ಆಗ ಮಾರ್ಕ್ಸ್ ಬಾರದೆ ಡಾಕ್ಟರ್ ಸೀಟ್ ಸಿಗದೆ ಇರೋದೆ ಒಳ್ಳೆಯಾದಯಿತು. ನಾನು ಡಾಕ್ಟರ್ ಆಗದೆ ಇರೋದೆ ಒಳ್ಳೆಯಾದಯಿತು, ಸಿಎಂ ಆದೆ ಈಗ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಿದ್ವಾಯಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಭಾಷಣ ಮಾಡಿದ ಅವರು, ತಮ್ಮ ಹಳೇ ದಿನಗಳನ್ನ ಮೆಲಕುಹಾಕಿದ್ರು. ನಾನು ಓದುತ್ತಿದ್ದ ಕಾಲೇಜಿನ ಬಳಿಯೆ ಮೈಸೂರು ಮೆಡಿಕಲ್ ಕಾಲೇಜ್ ಇತ್ತು. ಕಾಲೇಜ್ ಬಳಿ ಒಂದು ಕ್ಯಾಟೀನ್ ಇತ್ತು. ಅಲ್ಲಿ ದೋಸೆ ತಿನ್ನಲು ಹೋಗುತ್ತಿದ್ದೆ .ಆಗ 19 ಪೈಸೆ ಗೆ ಒಂದು ಮಸಾಲೆ ದೋಸೆ. ಸೆಟ್ ದೋಸೆ 12 ಪೈಸೆ. 12 ಪೈಸೆ ಗೆ 4 ನಾಲ್ಕು ದೋಸೆ. ನಾನು ಕಾಫಿ ಕುಡಿಯೋದು ಬಿಟ್ಟು ಎರಡು ಸೆಟ್ ದೋಸೆ ತಿನ್ನುತ್ತಿದ್ದೆ ಅಂತ ಹೇಳಿದರು.

ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ದರದಲ್ಲಿ ಟ್ರೀಟ್ಮೆಂಟ್ ಸಿಗಬೇಕು. ಪ್ರತಿ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ ನಿರ್ಮಾಣ ಆಗಬೇಕು. ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸಿಗಬೇಕು ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದರು.ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ ಮೈಸೂರು. ಹೀಗಾಗಿ ಅಗತ್ಯ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತುಗಳನ್ನೂ ಮೈಸೂರಿಗೆ ಒದಗಿಸಬೇಕಾಗಿದ್ದು ಇದಕ್ಕೆ ನಾನು ಬದ್ದವಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು..

ಬಡವರಿಗೆ, ದುಡಿಯುವ ವರ್ಗಗಳಿಗೆ ಚಿಕಿತ್ಸೆ ಭಾರ ಆಗಬಾರದು. ಉಚಿತ ಅಥವಾ ಕಡಿಮೆ ಖರ್ಚಿನಲ್ಲಿ ಇವರಿಗೆ ಆರೋಗ್ಯ, ಚಿಕಿತ್ಸೆ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಕಾಳಜಿ. ನಮ್ಮ ಸರ್ಕಾರ ಇರುವಾಗ ಮೈಸೂರು ನಗರಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸುತ್ತೇವೆ. ಪಾರಂಪರಿಕ ನಗರದ ಹೆಮ್ಮೆಯನ್ನು ನಾವು ಉಳಿಸುತ್ತೇವೆ. ಮೈಸೂರು ಜಿಲ್ಲೆಯ ಜನರ ಋಣ ತೀರಿಸಲು ನಾವು ಬದ್ಧರಾಗಿದ್ದೇವೆ ಎಂದರು.

Latest Indian news

Popular Stories