“ನಮಗೆ 15 ಸೆಕೆಂಡ್ ಕೊಡಿ” ಬಿಜೆಪಿ ನಾಯಕಿಯ ದ್ವೇಷಪೂರಿತ ಭಾಷಣಕ್ಕೆ “ಒವೈಸಿ” ಹೇಳಿದ್ರು ಕೊಡಿ 15 ಸೆಕೆಂಡ್ ಮೋದಿಜಿ !

ಅಸಾದುದ್ದೀನ್ ಓವೈಸಿ ಸಹೋದರರ ಪ್ರಾಬಲ್ಯವಿರುವ ಹೈದರಾಬಾದ್ ಲೋಕಸಭೆಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಮಾಧವಿ ಲತಾ ಅವರ ಪರ ಪ್ರಚಾರ ಮಾಡುವಾಗ ಬಿಜೆಪಿ ನಾಯಕಿ ನವನೀತ್ ರಾಣಾ ಅವರಿಂದ ದ್ವೇಷಪೂರಿತ ಹೇಳಿಕೆ ವಿವಾದ ಸೃಷ್ಟಿಸಿದೆ “… ಇದು ನಮಗೆ ಕೇವಲ 15 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ” ಎಂದು ಬಾಷಣ ಮಾಡುತ್ತ ಅಕ್ಬರುದ್ದೀನ್ ಒವೈಸಿಯ 15 ನಿಮಷ ಸಾಕು ಎಂಬ ಭಾಷಣವನ್ನು ಉಲ್ಲೇಖಿಸಿ ಹೇಳಿದರು.

ಮಹಾರಾಷ್ಟ್ರದ ಅಮರಾವತಿಯ ಮಾಜಿ ಸ್ವತಂತ್ರ ಸಂಸದೆ ಎಂಎಸ್ ರಾಣಾ ಅವರು 2013 ರಲ್ಲಿ ಅಕ್ಬರುದ್ದೀನ್ ಓವೈಸಿ ಅವರ ವಿವಾದಿತ ಹೇಳಿಕೆಯನ್ನು ಉಲ್ಲೇಖಿಸಿ, “ಕಿರಿಯ ಸಹೋದರ ಹೇಳಿದರು, “15 ನಿಮಿಷಗಳ ಕಾಲ ಪೊಲೀಸರನ್ನು ತೆಗೆದುಹಾಕಿ, ನಾವು ಏನು ಮಾಡಬಹುದು ಎಂಬುದನ್ನು ತೋರಿಸುತ್ತೇವೆ ಎಂದು, ನಾನು ಅವರಿಗೆ ಹೇಳಲು ಬಯಸುತ್ತೇನೆ. ‘ನಿಮಗೆ 15 ನಿಮಿಷಗಳನ್ನು ಬೇಕಾಗಬಹುದು… ಆದರೆ ಇದು ನಮಗೆ 15 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ…” ಎಂದು ವಿವಾದಿತ ಹೇಳಿಕೆ ನೀಡಿದ್ದು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಬಿಜೆಪಿ ನಾಯಕರು ಚಪ್ಪಾಳೆ ತಟ್ಟುವ ದೃಶ್ಯ ವೀಡಿಯೋದಲ್ಲಿದೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಒವೈಸಿ, ” ಮೋದಿಜಿ ಅವರಿಗಡ 15 ಸೆಕೆಂಡ್ ಕೊಡಿ. ನೀವು ಏನು ಮಾಡುತ್ತೀರಿ?…ಅವರಿಗೆ 15 ಸೆಕೆಂಡ್ ನೀಡಿ, ಅವರಿಗೆ 1 ಗಂಟೆ ಕೊಡಿ. ನಿಮ್ಮಲ್ಲಿ ಮಾನವೀಯತೆ ಉಳಿದಿದೆಯೇ ಎಂದು ನೋಡಲು ನಾವು ಬಯಸುತ್ತೇವೆ. ನೀನು ಮಾಡಿ, ನಿಮ್ಮನ್ನು ಯಾರು ತಡೆಯುತ್ತಾರೆ, ನಾವು ಎಲ್ಲಿಗೆ ಬರಬೇಕು ಎಂದು ಹೇಳಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹೈದರಾಬಾದ್ ಒವೈಸಿಯ ಭದ್ರಕೋಟೆಯಾಗಿದ್ದು ಬಿಜೆಪಿ ಇದುವರೆಗೆ ಇಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಇಬ್ಬರ ನಡುವಿನ ವಾಗ್ದಾಳಿ ಕದನ ಕುತೂಹಲ ಸೃಷ್ಟಿಸಿದರೆ, ಮತ್ತೊಂದೆಡೆ ದ್ವೇಷ ಪೂರಿತ ಮಾತಿನಿಂದಾಗಿ ಬಿಜಪಿ ವರ್ಚಸ್ಸು ಕಳೆದುಕೊಳ್ಳುತ್ತಿದೆ.

Latest Indian news

Popular Stories