ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭ – ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು

ಬೆಂಗಳೂರು: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭವಾಗಿದೆ.ಈ ಹಿನ್ನಲೆ ಊರಿಗೆ ಹೊರಟವರಿಗೆ ಬೆಲೆ ಏರಿಕೆ ಶಾಕ್ ಮುಟ್ಟಿದೆ ಬಸ್ ದರ ಎಕಾಏಕಿ ಏರಿಕೆಯಾಗಿದೆ.
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿವೆ.

ಹೌದು, ದಸರಾ ರಜೆಗೆ ಊರಿಗೆ ಹೋರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದು, ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗೆ ಹೋಗುವ ಬಸ್​ಗಳ ದರ ದುಪ್ಪಟ್ಟಾಗಿದೆ.ಅ.21ರಿಂದ ರಜೆಗಳು ಆರಂಭವಾಗುವ ಹಿನ್ನೆಲೆ ಜನರು ಅ. 20ರಂದು ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ ಮಾಡುತ್ತಿದ್ದು, ಟಿಕೆಟ್ ದರ ಕೇಳಿ ಪ್ರಯಾಣಿಕರು ಶಾಕ್ ಆಗಿದ್ದಾರೆ.

ಬೆಂಗಳೂರು-ಶಿವಮೊಗ್ಗಕ್ಕೆ 1150-1400 ರೂ. ಬೆಂಗಳೂರು- ಹುಬ್ಬಳಿ 600-850 ರೂ. ಬೆಂಗಳೂರು-ಮಂಗಳೂರು 1600-2000 ರೂ.ಬೆಂಗಳೂರು – ಉಡುಪಿ 1600-1900 ರೂ. ಬೆಂಗಳೂರು-ಬೆಳಗಾವಿ 1500-2100ಗೆ ಏರಿಕೆಯಾಗಿದೆ

Latest Indian news

Popular Stories