ಮೈಸೂರು:ಇಂದಿನಿಂದ ಮೈಸೂರು ದಸರಾ ಹಬ್ಬ ಶುರುವಾಗಲಿದೆ 10 ದಿನಗಳ ಕಾಲ ಮುಂದುವರಿಯಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನಾಡಿನ ಹೆಮ್ಮೆಯ ಮೈಸೂರು ದಸರಾಗೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ನಾಳೆಯಿಂದ 10 ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡು, ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ನಾಡಬಂಧುಗಳಲ್ಲಿ ವಿನಂತಿಸುತ್ತೇನೆ.”ಎಂದು ಜನತೆಗೆ ದಸರಾಗೆ ಆಹ್ವಾನಿಸಿದ್ದಾರೆ.
ಮೈಸೂರು ದಸರಾ ಹಬ್ಬ ಕಣ್ಮನ ಸೆಳೆಯುವಂತಿರುತ್ತದೆ.ಅರಮನೆಯ ಭವ್ಯ ದೀಪಾಲಂಕಾರ, ಕರಕುಶಲ ವಸ್ತುಗಳ ಪ್ರದರ್ಶನ, ಕೀಡಾಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಧಾರ್ಮಿಕ ಆಚರಣೆಗಳ ಕಣ್ಮನ ಸೆಳೆಯುವ ಹೂರಣವಿರಲಿದೆ. ಕರ್ನಾಟಕದ ಹೆಮ್ಮೆಯ ದ್ಯೋತಕವಾದ ದಸರಾ ಉತ್ಸವಕ್ಕೆ ತಾವೆಲ್ಲರೂ ಆಗಮಿಸಿ, ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ವಿನಂತಿಸುತ್ತೇನೆ.” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಆಹ್ವಾನಿಸಿದರು.